ಬೆಂಗಳೂರು, ಜುಲೈ 10: ತಾವರೆಕೆರೆನಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೀಕರ ಕೊಲೆ – ನಿಷ್ಠೂರ ಕೃತ್ಯದಿಂದ ಆಘಾತಕ್ಕೊಳಗಾದ ಕುಟುಂಬ
ಬೆಂಗಳೂರು ನಗರ ಹೊರವಲಯದ ತಾವರೆಕೆರೆ ನಗರದಲ್ಲಿ ಜುಲೈ 10 ಬುಧವಾರದಂದು ನಡೆದಿರುವ ಒಂದು ಹೃದಯವಿದ್ರಾವಕ ಘಟನೆ ಜನರಲ್ಲಿ ಆಕ್ರೋಶ ಹಾಗೂ ದುಃಖವನ್ನುಂಟುಮಾಡಿದೆ. 14 ವರ್ಷದ ನಿರಪರಾಧ ಬಾಲಕಿಯೊಬ್ಬಳು ಮನೆಯಲ್ಲಿ ಒಂಟಿಯಾಗಿ ಇದ್ದ ವೇಳೆ, ಸ್ಥಳೀಯ ವ್ಯಕ್ತಿಯೊಬ್ಬನು ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ.
ಈ ಕುಟುಂಬ ಮೂಲತಃ ಕೊಪ್ಪಳ ಜಿಲ್ಲೆಯಿಂದ ಬಂದಿದ್ದು, ಜೀವನೋಪಾಯಕ್ಕಾಗಿ ಒಂದೂವರೆ ವರ್ಷದ ಹಿಂದೆ ತಾವರೆಕೆರೆಗೆ ವಲಸೆ ಬಂದು ನೆಲಸಿದೆ. ಬಾಲಕಿಯ ತಂದೆ ಹಾಗೂ ತಾಯಿ ಇಬ್ಬರೂ ದಿನಗೂಲಿ ಕೆಲಸದೊಂದಿಗೆ ಜೀವನ ಸಾಗಿಸುತ್ತಿದ್ದರು. ಈ ಕುಟುಂಬ ಎರಡು ಗಂಡು ಮಕ್ಮಕಳು , ಒಬ್ಬ ಮಗಳು ಹೊಂದಿದ್ದು, ದೊಡ್ಡ ಮಗ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಚಿಕ್ಕವನು ಶಾಲೆಗೆ ಹೋಗುತ್ತಿದ್ದ. ಬಾಲಕಿ ಮಾತ್ರ, ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಇರುತ್ತಿದ್ದಳು.
ಘಟನೆ ನಡೆದ ದಿನದ ವಿವರ:
- ಬುಧವಾರದಂದು, ನಿಯಮಿತವಾಗಿಯೇ ಬಾಲಕಿಯ ತಂದೆ-ತಾಯಿ ಬೆಳಿಗ್ಗೆ 8 ಗಂಟೆಗೆ ತಮ್ಮ ಕೂಲಿ ಕೆಲಸಕ್ಕೆ ಹೊರಟಿದ್ದರು.
- ಗಂಡು ಮಕ್ಕಳು ತಮ್ಮ ತಮ್ಮ ತಮ್ಮ ಕೆಲಸ ಹಾಗೂ ಶಾಲೆಗಳ ಕಡೆ ತೆರಳಿದ್ದರು.
- ಮನೆಯಲ್ಲಿದ್ದವರಲ್ಲಿ ಬಾಲಕಿ ಒಬ್ಬಳೇ ಉಳಿದಿದ್ದಳು.
- ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿಗೆ, ಆಕೆಯ ಪರಿಚಿತನಾಗಿದ್ದ ದುಷ್ಕರ್ಮಿಯೊಬ್ಬನು ಮನೆಗೆ ನುಗ್ಗಿದ.
- ಮೂಲ ಮಾಹಿತಿ ಪ್ರಕಾರ, ಆರೋಪಿ ಗಾಂಜಾ ಸೇವಿಸಿ ಮದ್ಯನಾಶದಲ್ಲಿ ಈ ಕೃತ್ಯ ಎಸಗಿದ್ದಾನೆ.
- ಆರೋಪಿ ತಕ್ಷಣವೇ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ನಂತರ, ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಸಿಲಿಂಡರ್‌ನಿಂದ ಬಾಲಕಿಯ ಮುಖಕ್ಕೆ ಬಲವಾಗಿ ಹೊಡೆದು, ಆಕೆಯನ್ನು ಕೊಲೆಮಾಡಿದ್ದಾನೆ.
ಪರಿಣಾಮ:
ಬಾಲಕಿಯ ಅಣ್ಣ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಹಿಂದಿರುಗಿದಾಗ, ಈ ಭೀಕರ ದೃಶ್ಯ ಕಂಡಿದ್ದಾನೆ. ಬಾಲಕಿ ವಿವಸ್ತ್ರ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಆಘಾತಕ್ಕೊಳಗಾದನು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದರೂ, ಆಗಲೇ ಆಕೆ ಪ್ರಾಣಬಿಟ್ಟುಬಿಟ್ಟಿದ್ದಳು.
ಪೊಲೀಸರು ಕಾರ್ಯಚಟನೆ:
ಘಟನೆ ನಡೆದ ಕೂಡಲೇ ಸ್ಥಳೀಯ ಪೊಲೀಸರು ತನಿಖೆ ಪ್ರಾರಂಭಿಸಿ, ಅದೇ ರಾತ್ರಿ ತಾವರೆಕೆರೆಯಲ್ಲಿಯೇ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ರಾಯಚೂರು ಜಿಲ್ಲೆಯಿಂದ ಆಗಿದ್ದು, ತಾವರೆಕೆರೆ ಭಾಗದಲ್ಲಿ ಮರದ ಕೆಲಸ ಮಾಡುತ್ತಿದ್ದವನಾಗಿದ್ದಾನೆ. ತನಿಖೆದಾರರ ಪ್ರಕಾರ, ಆರೋಪಿ ಬಾಲಕಿಯ ಕುಟುಂಬದ ಹಿನ್ನೆಲೆ, ವಾಸಸ್ಥಳ, ಅವರ ದಿನಚರ್ಯೆಯ ಕುರಿತು ಪರಿಚಯ ಹೊಂದಿದ್ದ ಎನ್ನಲಾಗಿದೆ.
ಈ ತೀವ್ರ ದಾರುಣ ಕೃತ್ಯವು ರಾಜ್ಯದ ಜನರಲ್ಲಿ ಆಕ್ರೋಶವನ್ನು ಉಂಟುಮಾಡಿದ್ದು, ತಾವರೆಕೆರೆ ಭಾಗದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಮಕ್ಕಳು ಹಾಗೂ ಮಹಿಳೆಯರ ಭದ್ರತೆ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿರುವಂತಾಗಿದ್ದು, ಪೀಡಿತ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲಿ ಎಂಬುದು ಎಲ್ಲಾ ಜನರ ಪ್ರಾರ್ಥನೆ.