ಮಗುವನ್ನು ಬಿಟ್ಟು ಜೋಲಿಗೆ ನೇಣು ಹಾಕಿಕೊಂಡ ತಾಯಿ: ಮನ ಕಲ್ಲಾಗುವ ಘಟನೆ Mother hangs herself in a sling, abandoning her child: A heartbreaking incident

ಮಗುವನ್ನು ಬಿಟ್ಟು ಜೋಲಿಗೆ ನೇಣು ಹಾಕಿಕೊಂಡ ತಾಯಿ: ಮನ ಕಲ್ಲಾಗುವ ಘಟನೆ Mother hangs herself in a sling, abandoning her child: A heartbreaking incident

ಚಿಕ್ಕಬಳ್ಳಾಪುರ: ಒಂದು ವರ್ಷದ ಮಗುವಿನ ಸಮ್ಮುಖದಲ್ಲೇ ಮಹಿಳೆಯೊಬ್ಬರು ಜೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿನ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಝಾನ್ಸಿ (23) ಎಂದು ಗುರುತಿಸಲಾಗಿದೆ. ಪತಿ ಈಶ್ವರ್ ಕ್ರೈನ್ ಅಪರೇಟರ್ ಆಗಿದ್ದು, ಅವರು ಊಟಕ್ಕೆ ಮನೆಗೆ ಬಂದಾಗ ಪತ್ನಿಯ ಆತ್ಮಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.ತಾಯಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮಗುವು ಆಕೆಯ ಕಾಲುಗಳ ಬಳಿಯೇ ಮಲಗಿದ್ದ ದೃಶ್ಯ ಮನಕಲಕುವಂತಾಗಿತ್ತು.

ಆತ್ಮಹತ್ಯೆಗೆ ನಿಖರವಾದ ಕಾರಣವೊಂದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *