ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು Two boys who had gone swimming in the sea drowned

ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು Two boys who had gone swimming in the sea drowned

ಮಂಗಳೂರು: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಸುರತ್ಕಲ್‌ನ (Surathkal) ಎನ್‌ಐಟಿಕೆ ಬೀಚ್‌ನಲ್ಲಿ (NITK Beach) ನಡೆದಿದೆ.ಧ್ಯಾನ್ ಬಂಜನ್(18), ಹನೀಶ್ ಕುಲಾಲ್(15) ಸಮುದ್ರಪಾಲಾದ ಬಾಲಕರು.

ಬುಧವಾರ ಸೂರಿಂಜೆಯ ಕುಟುಂಬವೊಂದರ ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದುದರಿಂದ ಕುಟುಂಬದ ಸದಸ್ಯರು ಮುಂಬೈನಿAದ ಬಂದಿದ್ದರು. ಮದುಮಗಳ ಸಹೋದರನ ಜೊತೆಗೆ ಹತ್ತು ಮಂದಿ ಸಂಜೆ ಬೀಚ್‌ಗೆ ತೆರಳಿದ್ದರು. ಈ ವೇಳೆ ಬಾಲಕರಿಬ್ಬರು ಸಮುದ್ರ ಪಾಲಾಗಿದ್ದಾರೆ. ತಕ್ಷಣ ಲೈಫ್ ಗಾರ್ಡ್‌ಗಳು ಧ್ಯಾನ್‌ನನ್ನ ರಕ್ಷಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಹನೀಶ್ ಸಮುದ್ರ ಪಾಲಾಗಿದ್ದು, ಈಜುಗಾರರ ತಂಡದಿಂದ ಹುಡುಕಾಟ ನಡೆಯುತ್ತಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *