ಸ್ನೇಹಿತರ ಕ್ರೆಡಿಟ್ ಕಾರ್ಡ್‍ನಿಂದ ಲಕ್ಷ ಲಕ್ಷ ಸಾಲ – ಲೋನ್ ಕಟ್ಟು ಎಂದ್ರೆ ಲಾಸ್ಟ್ ಆಪ್ಷನ್ ಅಂತ ವಿಷ ಕುಡಿದ! Borrowing lakhs from a friend’s credit card – he drank poison, thinking that taking out a loan was the last option!

ವಿಜಯಪುರ: ವ್ಯಕ್ತಿಯೊಬ್ಬ 13 ಜನ ಸ್ನೇಹಿತರ ಕ್ರೆಡಿಟ್ ಕಾರ್ಡ್ (Credit Card) ಬಳಸಿ ಲಂಕ್ಷಾಂತರ ರೂ. ಸಾಲ (Loan) ಮಾಡಿ, ಸಾಲ ತೀರಿಸು ಎಂದಾಗ ವಿಡಿಯೋ ಮಾಡಿ ಕೀಟನಾಶಕ ಸೇವಿಸಿರುವುದು ವಿಜಯಪುರದಲ್ಲಿ (Vijayapura) ನಡೆದಿದೆ.

ಆದರ್ಶ ನಗರದ ನಿವಾಸಿ ಶೋಭಿತ ಬಳ್ಳೊಳಗಿಡದ್ ಎಂಬಾತ ಗೆಳೆಯರ ಕ್ರೆಡಿಟ್ ಕಾರ್ಡ್ ಬಳಸಿ ದುಬಾರಿ ಬೆಲೆಯ ಮೊಬೈಲ್, ಗ್ಯಾಜೆಟ್ಸ್ ಖರೀದಿಸುತ್ತಿದ್ದ. ಹೀಗೆ ಗೆಳೆಯರ ಕ್ರೆಡಿಟ್ ಕಾರ್ಡ್ ಬಳಸಿ 50 ಲಕ್ಷ ರೂ. ಸಾಲ ಮಾಡಿದ್ದ. ಇದರಿಂದ ಸ್ನೇಹಿತರು ಸಾಲ ಕಟ್ಟುವಂತೆ ಆತನಿಗೆ ಹಾಗೂ ಆತನ ಕುಟುಂಬದವರಿಗೆ ಹೇಳಿದ್ದರು. 

ಇದೇ ವಿಚಾರಕ್ಕೆ ಆತ ವಿಡಿಯೋ ಮಾಡಿ, ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಪಡೆದಿದ್ದೆ. ಈಗ ಎಲ್ಲರೂ ಮನೆಯವರಿಗೆ ಟಾರ್ಚರ್ ಮಾಡ್ತಿದ್ದಾರೆ. ನನ್ನಿಂದ ಯಾರಿಗೂ ಟಾರ್ಚರ್ ಆಗಬಾರದು. ಎಲ್ಲರೂ ಆರಾಮ್ ಆಗಿರಿ, ಇದು ನನಗೆ ಲಾಸ್ಟ್ ಆಪ್ಷನ್ ಎಂದು ಕ್ರಿಮಿನಾಶಕದ ಬಾಟೆಲ್ ತೋರಿಸಿದ್ದಾನೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಶೋಭಿತನ ತಂದೆ, ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ 13 ಜನ ಗೆಳೆಯರ ಹೆಸರನ್ನು ಉಲ್ಲೇಖಿಸಲಾಗಿದೆ.

Spread the love

Leave a Reply

Your email address will not be published. Required fields are marked *