ಮೊಬೈಲ್‌ ವಿಚಾರಕ್ಕೆ ಗಲಾಟೆ – ತಂದೆ ಎದೆಗೆ ಚೂರಿ ಹಾಕಿ ಕೊಂದ ಮಗ A fight over a mobile phone – Son stabs father to death in the chest

ಮೊಬೈಲ್‌ ವಿಚಾರಕ್ಕೆ ಗಲಾಟೆ – ತಂದೆ ಎದೆಗೆ ಚೂರಿ ಹಾಕಿ ಕೊಂದ ಮಗ A fight over a mobile phone – Son stabs father to death in the chest

ಮೈಸೂರು: ಮೊಬೈಲ್‌ (Mobile) ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. 2ನೇ ಹೆಂಡತಿಯ ಮಗ ತಂದೆ ಎದೆಗೆ ಚೂರಿ ಹಾಕಿ ಕೊಂದು ಪರಾರಿಯಾಗಿದ್ದಾನೆ.

ಭಾನುವಾರ ತಡರಾತ್ರಿ ಮೈಸೂರಿನ ಶಾಂತಿನಗರದಲ್ಲಿ ಘಟನೆ ನಡೆದಿದೆ. ಸೈಯದ್ ಮುತ್ತಿಫ್ (35) ಕೊಲೆಯಾದ ತಂದೆ, ಮತೀನ್ (21) ಕೊಲೆ ಮಾಡಿದ ಮಗ.

2ನೇ ಹೆಂಡತಿ ಪುತ್ರನಾದ ಮತೀನ್‌ ಮನೆಗೆ ಬರುವಂತೆ ಕರೆ ಮಾಡಿದ್ದಾನೆ. ಆದ್ರೆ ತಂದೆ ಮನೆಗೆ ಬರ್ತಿದಂತೆ ಎದೆಗೆ ಚೂರಿಯಿಂದ ಚುಚ್ಚಿ ಕೊಲೆ ಮಾಡಿ, ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *