ಕುಟುಂಬವೊಂದಕ್ಕೆ ತಮ್ಮ ಮನೆಯಲ್ಲಿ ಚಿನ್ನ ಕದ್ದೋಗಿ ಆರು ತಿಂಗಳುಗಳೇ ಕಳೆದಿದ್ದರೂ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ, ಆದರೆ ಇತ್ತೀಚೆಗೆ ಅವರ ಹಳೆಯ ಕೆಲಸದಾಕೆಯ ಡಾನ್ಸ್ ವೀಡಿಯೋವೊಂದು ವೈರಲ್ ಆಗಿದ್ದು, ಆ ವೀಡಿಯೋ ಕಳವಿನ ಬಗ್ಗೆ ಸುಳಿವು ನೀಡಿದೆ.
ಸಾಮಾನ್ಯವಾಗಿ ಮನೆಯಲ್ಲಿ ಭದ್ರವಾಗಿ ತೆಗೆದಿಟ್ಟ ಚಿನ್ನವನ್ನು ಯಾರೂ ಕೂಡ ಆಗಾಗ ನೋಡಿಕೊಂಡು ಇರುವುದಿಲ್ಲ, ಏನಾದರೂ ದೊಡ್ಡ ಹಬ್ಬ ಸಮಾರಂಭಗಳಿದ್ದಾಗ ಮಾತ್ರ ಈ ಚಿನ್ನದ ದುಬಾರಿ ಆಭರಣಗಳು ಕತ್ತನ್ನು ಅಲಂಕರಿಸುತ್ತವೆ. ಹೀಗಾಗಿ ಕುಟುಂಬವೊಂದಕ್ಕೆ ತಮ್ಮ ಮನೆಯಲ್ಲಿ ಚಿನ್ನ ಕದ್ದೋಗಿ ಆರು ತಿಂಗಳುಗಳೇ ಕಳೆದಿದ್ದರೂ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ, ಆದರೆ ಇತ್ತೀಚೆಗೆ ಅವರ ಹಳೆಯ ಕೆಲಸದಾಕೆಯ ಡಾನ್ಸ್ ವೀಡಿಯೋವೊಂದು ವೈರಲ್ ಆಗಿ ಮನೆ ಮಾಲೀಕರನ್ನು ತಲುಪಿತ್ತು. ಅದರಲ್ಲಿ ಕೆಲಸದಾಕೆ ಧರಿಸಿದ್ದ ಚಿನ್ನಾಭರಣ ನೋಡಿ ಅನುಮಾನ ಬಂದು ತಮ್ಮ ಮನೆಯ ಚಿನ್ನ ಇಡುವ ಕಬೋರ್ಡ್ ತೆಗೆದ ಮನೆ ಮಾಲೀಕರಿಗೆ ಶಾಕ್ ಕಾದಿತ್ತು. ಅಲ್ಲಿಟ್ಟಿದ್ದ ಅವರ ಚಿನ್ನದ ಆರಭರಣಗಳು ಮಿಸ್ ಆಗಿತ್ತು.