ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌ Street lustful man arrested after 10 days for hugging and behaving indecently with a young woman

ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌ Street lustful man arrested after 10 days for hugging and behaving indecently with a young woman

ಬೆಂಗಳೂರು: ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿ ಎಸ್ಕೇಪ್‌ ಆಗಿದ್ದ ಕಾಮುಕ ಆರೋಪಿಯನ್ನು 10 ದಿನಗಳ ನಂತರ ಸುದ್ದಗುಂಟೆಪಾಳ್ಯ ಪೊಲೀಸರು (Suddagunte Palya) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಸಂತೋಷ್ ಡೇನಿಯಲ್ ಎಂದು ಗುರುತಿಸಲಾಗಿದೆ, ಈತ ಬೆಂಗಳೂರಿನ ಶೋರೂಮ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್‌ 3ರ ಮಧ್ಯರಾತ್ರಿ ಬೆಂಗಳೂರಿನ ಬಿಟಿಎಂ ಲೇಔಟ್‌ನ (BTM Layout) ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಯುವಕ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ಈತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.

3 ರಾಜ್ಯ, 700 ಸಿಸಿಟಿವಿ ಪರಿಶೀಲನೆ:
ಘಟನೆ ಸಂಬಂಧ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಬೀದಿ ಕಾಮಣ್ಣನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. 4 ವಿಶೇಷ ತಂಡಗಳನ್ನು ರಚಿಸಿ ಆರೋಪಿ ಮತ್ತು ಸಂತ್ರಸ್ತ ಯುವತಿಯ ಪತ್ತೆಗೆ ಇಳಿದಿದ್ದರು. ತನಿಖೆ ವೇಳೆ ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಕೊನೆಗೆ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ತಮಿಳುನಾಡಿನ ಹೊಸೂರಿಗೆ ಪರಾರಿಯಾಗಿದ್ದ, ನಂತರ ಸೇಲಂ, ಬಳಿಕ ಕೇರಳದ ಕೋಝಿಕೋಡ್‌ಗೆ ಪರಾರಿಯಾಗಿದ್ದ. ಕೊನೆಗೆ ಕೇರಳದ ಹಳ್ಳಿಯೊಂದರಲ್ಲಿ ಭಾನುವಾರ (ಏ.13) ಸಿಕ್ಕಿಬಿದ್ದಿದ್ದಾನೆ.ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ಯುವಕನೊಬ್ಬ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿ ಎದೆಯ ಭಾಗವನ್ನು ಮುಟ್ಟಿ ಪರಾರಿಯಾಗಿದ್ದ. ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏಪ್ರಿಲ್ 3ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಸ್ಥಳೀಯ ನಿವಾಸಿಯೊಬ್ಬರ ದೂರು ಆಧರಿಸಿ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಘಟನೆ ಸಂಬಂಧ ಸಂತ್ರಸ್ತ ಯುವತಿಯರು ದೂರು ನೀಡಿಲ್ಲ. ಆದರೆ ಸ್ಥಳೀಯ ನಿವಾಸಿಯೊಬ್ಬರು ಸಿಸಿಟಿವಿ ಕ್ಯಾಮೆರಾ ದೃಶ್ಯದೊಂದಿಗೆ ಠಾಣೆಗೆ ದೂರು ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *