ಜಂಡರ್ ರಿವೀಲ್ ಪಾರ್ಟಿ, ಗರ್ಭಪಾತಕ್ಕೆ ಕಾರಣವಾಗಿರುವ ಘಟನೆ ವೈರಲ್ ಆಗಿದೆ. ಭಾರತದಲ್ಲಿ ಗರ್ಭದಲ್ಲಿರುವ ಶಿಶುವಿನ ಲಿಂಗ ಪರೀಕ್ಷೆ ಕಾನೂನು ಬಾಹಿರ. ಆದರೆ ಬೇರೆ ದೇಶಗಳಲ್ಲಿ ಇದಕ್ಕೆ ಅವಕಾಶವಿದೆ. ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ ಸೃಷ್ಟಿಯಾಗಿ, ಬಳಿಕ ಅದು ಗರ್ಭಪಾತಕ್ಕೆ ಎಡೆ ಮಾಡಿಕೊಟ್ಟಿರುವ ಘಟನೆ ನಡೆದಿದೆ. ಡಿಎನ್ಎ ಪ್ರಯೋಗಾಲಯ ಮಾಡಿದ ತಪ್ಪಿನಿಂದ ಆಕೆಯನ್ನು ಮಗುವನ್ನು ತೆಗೆಸಿದ್ದಾಳೆ. ಬ್ರಾಂಕ್ಸ್ ಮತ್ತು ಓಹಿಯೋ ಮೂಲದ ಡಿಎನ್ಎ ಡಯಾಗ್ನೋಸ್ಟಿಕ್ಸ್ ಸೆಂಟರ್‌ನಲ್ಲಿರುವ ವಿನ್ ಹೆಲ್ತ್ ಲ್ಯಾಬ್ಸ್‌ನ ತಪ್ಪಾದ ಪಿತೃತ್ವ ಪರೀಕ್ಷೆಯ ಫಲಿತಾಂಶ ತಾನು ಗರ್ಭಪಾತ ಮಾಡಿಕೊಳ್ಳಲು ಕಾರಣವಾಯಿತು ಎಂದು ಮಹಿಳೆ ಹೇಳಿದ್ದಾಳೆ. ತನ್ನ ಮಗು ಏಪ್ರಿಲ್ 17ರಂದು ಜನಿಸಬೇಕಿತ್ತು ಎಂದು ಕಣ್ಣೀರು ಹಾಕಿದ್ದಾಳೆ.ಭಾರತದಲ್ಲಿ ಗರ್ಭದಲ್ಲಿರುವ ಶಿಶುವಿನ ಲಿಂಗ ಪರೀಕ್ಷೆ ಕಾನೂನು ಬಾಹಿರ. ಆದರೆ ಬೇರೆ ದೇಶಗಳಲ್ಲಿ ಇದಕ್ಕೆ ಅವಕಾಶವಿದೆ. ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ ಸೃಷ್ಟಿಯಾಗಿ, ಬಳಿಕ ಅದು ಗರ್ಭಪಾತ(Abortion)ಕ್ಕೆ ಎಡೆ ಮಾಡಿಕೊಟ್ಟಿರುವ ಘಟನೆ ನಡೆದಿದೆ. ಡಿಎನ್ಎ ಪ್ರಯೋಗಾಲಯ ಮಾಡಿದ ತಪ್ಪಿನಿಂದ ಆಕೆಯನ್ನು ಮಗುವನ್ನು ತೆಗೆಸಿದ್ದಾಳೆ. ಬ್ರಾಂಕ್ಸ್ ಮತ್ತು ಓಹಿಯೋ ಮೂಲದ ಡಿಎನ್ಎ ಡಯಾಗ್ನೋಸ್ಟಿಕ್ಸ್ ಸೆಂಟರ್‌ನಲ್ಲಿರುವ ವಿನ್ ಹೆಲ್ತ್ ಲ್ಯಾಬ್ಸ್‌ನ ತಪ್ಪಾದ ಪಿತೃತ್ವ ಪರೀಕ್ಷೆಯ ಫಲಿತಾಂಶ ತಾನು ಗರ್ಭಪಾತ ಮಾಡಿಕೊಳ್ಳಲು ಕಾರಣವಾಯಿತು ಎಂದು ಮಹಿಳೆ ಹೇಳಿದ್ದಾಳೆ. ತನ್ನ ಮಗು ಏಪ್ರಿಲ್ 17ರಂದು ಜನಿಸಬೇಕಿತ್ತು ಎಂದು ಕಣ್ಣೀರು ಹಾಕಿದ್ದಾಳೆ.
ಆಕೆ ಮದುವೆಯಾಗಿದ್ದಳು, ಆದರೆ ಎಷ್ಟು ವರ್ಷಗಳು ಕಳೆದರೂ ಆಕೆ ಗರ್ಭಧರಿಸಲು ಸಾಧ್ಯವಾಗಿರಲಿಲ್ಲ, ಬಂಜೆತನದ ಒತ್ತಡದಿಂದಾಗಿ ಅವರಿಬ್ಬರು ಬೇರ್ಪಟ್ಟರು. ಈ ಸಮಯದಲ್ಲಿ ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಕೆಲ ಸಮಯದ ಬಳಿಕ ಮತ್ತೆ ಗಂಡ ಹೆಂಡತಿ ಒಂದಾಗಿದ್ದರೆ., ಇದಾದ ಕೆಲವೇ ದಿನಗಳಲ್ಲಿ ಆಕೆ ಗರ್ಭಿಣಿ ಕೂಡ ಆಗಿದ್ದಾಳೆ. ಎಲ್ಲರೂ ಸಂತಸದಿಂದಿದ್ದರು. ಆಕೆಗೆ 20 ವಾರಗಳು ತುಂಬಿದ್ದವು.
ಆಕೆ ತಂದೆಯಾರೆಂದು ತಿಳಿಯಲು ಡಿಎನ್ಎ ಪರೀಕ್ಷೆ ಮಾಡಿಸಿದ್ದಳು, ತಮ್ಮ ಮಾದರಿಗಳನ್ನು ಸಲ್ಲಿಸಲು ಬ್ರಾಂಕ್ಸ್‌ನಲ್ಲಿರುವ ವಿನ್ ಹೆಲ್ತ್ ಲ್ಯಾಬ್ಸ್‌ಗೆ ಹೋದರು, ಇದು ಹೇರ್ ಸಲೂನ್‌ನ ಹಿಂಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ. ಹೇಗೂ ತನ್ನ ಗಂಡನೇ ಮಗುವಿನ ತಂದೆ ಎನ್ನುವ ಭಾವನೆಯಲ್ಲಿ ಜಂಡರ್ ರಿವೀಲ್ ಪಾರ್ಟಿಯನ್ನು ಕೂಡ ಆಯೋಜಿಸಿದ್ದರು. ಆದರೆ ಪಾರ್ಟಿ ದಿನವೇ ಬಂದಿರುವ ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಆತನಲ್ಲ ಎಂದು ಬರೆಯಲಾಗಿತ್ತು. ಇದು ಅಚ್ಚರಿ ಹಾಗೂ ನಿರಾಸೆಗೊಳಿಸಿತ್ತು.
ಆ ಹೊತ್ತಿಗೆ, ಆ ಮಹಿಳೆ ಸುಮಾರು 20 ವಾರಗಳ ಗರ್ಭಿಣಿಯಾಗಿದ್ದಳು ಬಳಿಕ ಗರ್ಭಪಾತ ಮಾಡಿಸಿಕೊಂಡಿದ್ದಳು. ಗಂಡ ಕೂಡ ಈ ರಿಪೋರ್ಟ್ ನೋಡಿ ದಂಗಾಗಿದ್ದ. ಎರಡು ದಿನಗಳ ಆಸ್ಪತ್ರೆಯಲ್ಲೇ ಇದ್ದು ಒಲ್ಲದ ಮನಸ್ಸಿನಿಂದ ಶಸ್ತ್ರ ಚಿಕಿತ್ಸೆ ಮಾಡಿಸಿ ಗರ್ಭಪಾತ ಮಾಡಿಸಿಕೊಮಡಿದ್ದಳು.
ಇದಾದ ದಿನವೇ ಲ್ಯಾಬ್ನಿಂದ ಕರೆ ಬಂದಿತ್ತು. ತಪ್ಪಾಗಿದೆ ಕ್ಷಮಿಸಿ, ತಾಂತ್ರಿಕ ದೋಷದಿಂದ ಇದು ಸಂಭವಿಸಿದೆ. ಆಕೆಯ ಗಂಡನೇ ಮಗುವಿನ ತಂದೆ ಎಂದು ಹೇಳಿದ್ದಾರೆ. ಈ ತಪ್ಪಿನಿಂದ ಗಂಡ ಹೆಂಡತಿ ಮಾರ್ಚ್ನಲ್ಲಿ ದೂರವಾಗಿದ್ದರು. ಲ್ಯಾಬ್ ತಪ್ಪಿನಿಂದ ಮುಗ್ದ ಜೀವವೊಂದು ಪ್ರಾಣ ಕಳೆದುಕೊಂಡಿತ್ತು.