ಮಹಿಳೆಗೆ ಮದ್ಯ ಕುಡಿಸಿ, ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳಾದ ಶಿವೇಂದ್ರ ಯಾದವ್ (26) ಮತ್ತು ಆತನ ಸಹಾಯಕ ಗೌರವ್ (19) ಮೊದಲು ಆಸ್ತಿ ದಾಖಲೆಗಳನ್ನು ನೀಡಲು ಸಂತ್ರಸ್ತೆಗೆ ಕರೆ ಮಾಡಿ, ಆಕೆ ಬಂದ ಬಳಿಕ ಆಕೆಗೆ ಮದ್ಯ ಕುಡಿಸಿ, ಉಸಿರುಗಟ್ಟಿಸಿ ಕೊಂದು, ಸುಟ್ಟು ಹಾಕಿ, ಅರೆಬರೆ ಬೆಂದ ಶವವನ್ನು ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆಕೆಯ ಸಹೋದರಿ ಕಿರಣ್ ಹೇಳುವಂತೆ ಆರೋಪಿಯು ಅಂಜಲಿಯಿಂದ ಭೂಮಿಗಾಗಿ 6 ಲಕ್ಷ ರೂ.ಗಳನ್ನು ಪಡೆದಿದ್ದ. ನಂತರ ದಾಖಲೆಗಳನ್ನು ನೀಡುವ ನೆಪದಲ್ಲಿ ಅವನು ತನಗೆ ಕರೆ ಮಾಡಿ ಆಕೆಯನ್ನು ಕೊಂದಿದ್ದಾನೆ ಎಂದು ಹೇಳಿದ್ದಾರೆ.
ಲಕ್ನೋ, ಏಪ್ರಿಲ್ 13: ವ್ಯಕ್ತಿಯೊಬ್ಬ ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಲೆ(Murdre) ಮಾಡಿ ಬಳಿಕ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳಾದ ಶಿವೇಂದ್ರ ಯಾದವ್ (26) ಮತ್ತು ಆತನ ಸಹಾಯಕ ಗೌರವ್ (19) ಮೊದಲು ಆಸ್ತಿ ದಾಖಲೆಗಳನ್ನು ನೀಡಲು ಸಂತ್ರಸ್ತೆಗೆ ಕರೆ ಮಾಡಿ, ಆಕೆ ಬಂದ ಬಳಿಕ ಆಕೆಗೆ ಮದ್ಯ ಕುಡಿಸಿ, ಉಸಿರುಗಟ್ಟಿಸಿ ಕೊಂದು, ಸುಟ್ಟು ಹಾಕಿ, ಅರೆಬರೆ ಬೆಂದ ಶವವನ್ನು ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ದಿನಗಳಿಂದ ಕಾಣೆಯಾಗಿದ್ದ ಅಂಜಲಿಯ ಶವ ಶನಿವಾರ ನದಿಯ ಬಳಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಯು ತನ್ನ ತಂದೆ ಮತ್ತು ಹೆಂಡತಿಗೆ ವೀಡಿಯೊ ಕರೆ ಮಾಡಿ ಸಂತ್ರಸ್ತೆಯ ಶವವನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳ ಕುಟುಂಬ ಸದಸ್ಯರು ಚರಂಡಿಯ ಬಳಿ ಸುಟ್ಟು ಕರಕಲಾದ ಸ್ಕೂಟರ್ ಅನ್ನು ಕಂಡುಕೊಂಡ ನಂತರ ಆಕೆಯ ವ್ಯವಹಾರ ಪಾರ್ಟ್ನರ್ ಆಗಿದ್ದ ವ್ಯಕ್ತಿ ಮೇಲೆ ಕೊಲೆ ಆರೋಪ ಹೊರಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು.
ಆಕೆಯ ಸಹೋದರಿ ಕಿರಣ್ ಹೇಳುವಂತೆ ಆರೋಪಿಯು ಅಂಜಲಿಯಿಂದ ಭೂಮಿಗಾಗಿ 6 ಲಕ್ಷ ರೂ.ಗಳನ್ನು ಪಡೆದಿದ್ದ. ನಂತರ ದಾಖಲೆಗಳನ್ನು ನೀಡುವ ನೆಪದಲ್ಲಿ ಅವನು ತನಗೆ ಕರೆ ಮಾಡಿ ಆಕೆಯನ್ನು ಕೊಂದಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ ಯಾದವ್ ಮತ್ತು ಅವರ ಪತ್ನಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಸಂಬಂಧಿಯ ಕೊಂದು, ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಯುವಕ ವ್ಯಕ್ತಿಯೊಬ್ಬ ತನ್ನ ಸಂಬಂಧಿಯನ್ನು ಕೊಂದು, ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದಿರುವ ಘಟನೆ ಒಡಿಶಾದ ಕಿಯೋಂಜಾರ್ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಂಬಂಧಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ(Murder) ಮಾಡಿ, ತಲೆಯನ್ನು ಕತ್ತರಿಸಿ ಚೀಲದಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದ.
ಆರೋಪಿ ಯುವಕ ಸ್ವತಃ ಪೊಲೀಸ್ ಠಾಣೆಗೆ ಹೋಗಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಆರೋಪಿಯನ್ನು ಕಬಿ ದೇಹುರಿ ಎಂದು ಗುರುತಿಸಲಾಗಿದ್ದು, ಶುಕ್ರವಾರ ತಡರಾತ್ರಿ ತನ್ನ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕಬಿಗೆ ತನ್ನ ಸಂಬಂಧಿ ಮೇಲೆ ಬಹಳ ದಿನಗಳಿಂದ ದ್ವೇಷವಿತ್ತು ಎಂದು ಹೇಳಲಾಗುತ್ತಿದೆ, ಇದಕ್ಕೆ ಕಾರಣ ಭೂಮಿಯ ವಿವಾದ.
ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ರಾತ್ರಿ ಗ್ರಾಮದಲ್ಲಿ ‘ದಂಡಾ ನಾಚಾ’ ಎಂಬ ಸಾಂಪ್ರದಾಯಿಕ ನೃತ್ಯ ನಡೆಯುತ್ತಿತ್ತು, ಇದರಿಂದಾಗಿ ಹೆಚ್ಚಿನ ಗ್ರಾಮಸ್ಥರು ಕಾರ್ಯನಿರತರಾಗಿದ್ದರು. ಈ ಅವಕಾಶವನ್ನು ಬಳಸಿಕೊಳ್ಳುತ್ತಾ, ಕಬಿ ತನ್ನ ಸಂಬಂಧಿಯನ್ನು ಹೊಲಕ್ಕೆ ಕರೆದೊಯ್ದು, ಕೊಡಲಿಯಿಂದ ಕೊಚ್ಚಿ ಶಿರಚ್ಛೇದ ಮಾಡಿದ್ದ.