ದೆಹಲಿಯ ಶಹದಾರಾದಲ್ಲಿ ಹಲವಾರು ಹೆಣ್ಣು ನಾಯಿಗಳ ಮೇಲೆ ‘ಅತ್ಯಾಚಾರ’ ಮಾಡಿದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವೈರಲ್ ಆಗಿರುವ ವೀಡಿಯೊವನ್ನು ಪ್ರಾಣಿ ಕಾರ್ಯಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಆ ವ್ಯಕ್ತಿಯನ್ನು ಬಂಧನದಲ್ಲಿಟ್ಟು ಹಲವಾರು ಜನರು ಥಳಿಸುತ್ತಿರುವುದನ್ನು ನೋಡಬಹುದು. ಆತ ಮಾಡಿದ ಕೃತ್ಯಕ್ಕೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನವದೆಹಲಿ, ಏಪ್ರಿಲ್ 12: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಆಘಾತಕಾರಿ ಮತ್ತು ಅತ್ಯಂತ ಭಯಾನಕ ಘಟನೆಯಲ್ಲಿ (Shocking News) ದೆಹಲಿಯ ಶಹದಾರಾ ಜಿಲ್ಲೆಯ ಕೈಲಾಶ್ ನಗರ ಪ್ರದೇಶದಲ್ಲಿ ಇಂದು (ಏಪ್ರಿಲ್ 12) ಹಲವಾರು ನಾಯಿಗಳ ಮೇಲೆ ‘ಅತ್ಯಾಚಾರ‘ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ ನಂತರ ಆರೋಪಿ ನೌಶಾದ್‌ನನ್ನು ಬಂಧಿಸಲಾಗಿದೆ. ನೌಶಾದ್ ಎನ್‌ಜಿಒಗೆ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ.
ನೆಲಮಂಗಲದ ಪುನರ್ವಸತಿ ಕೇಂದ್ರದಲ್ಲಿ ಮನಸೋ ಇಚ್ಚೆ ಹಲ್ಲೆ ನಡೆಸಿದ ಸಿಬ್ಬಂದಿ
ಆ ವ್ಯಕ್ತಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿಯೂ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ ಜನರು ಅವನನ್ನು ಹೊಡೆಯುವುದನ್ನು ಮತ್ತು ಅವನು ಎಷ್ಟು ನಾಯಿಗಳ ಮೇಲೆ ಅತ್ಯಾಚಾರ ಮಾಡಿದನೆಂದು ಕೇಳುವುದನ್ನು ಸಹ ಕಾಣಬಹುದು.
ಈ ವಿಡಿಯೋವನ್ನು ಪ್ರಾಣಿ ಕಾರ್ಯಕರ್ತನೊಬ್ಬ ತನ್ನ ಎಕ್ಸ್ ಖಾತೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಆ ವ್ಯಕ್ತಿಯನ್ನು ಬಂಧನದಲ್ಲಿಟ್ಟು ಹಲವಾರು ಜನರು ಥಳಿಸುತ್ತಿರುವ ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ “ನೀವು ಎಷ್ಟು ನಾಯಿಗಳ ಮೇಲೆ ಅತ್ಯಾಚಾರ ಮಾಡಿದ್ದೀರಿ?” ಎಂದು ಕೇಳಿದ್ದಾರೆ. ಈ ವೇಳೆ ಹಲವಾರು ರಾಜಕೀಯ ನಾಯಕರು, ದೆಹಲಿ ಪೊಲೀಸರು, ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಕಚೇರಿಯನ್ನು ಸಹ ಟ್ಯಾಗ್ ಮಾಡಲಾಗಿದೆ.