ಯಾದಗಿರಿ ಜಿಲ್ಲಾ ದಾರುಣ ಘಟನೆ
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಪೇಟ್ಲಾ ಗ್ರಾಮದಲ್ಲಿ ಅತೀ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಸ್ವಂತ ಮನೆಯವರಿಂದಲೇ ನಂಬಿಕೆಗೆ ಧಕ್ಕೆ ತರುವಂತಹ ವರ್ತನೆ ನಡೆದಿದೆ. ಚಿಕ್ಕಪ್ಪನ ಪತ್ನಿಯ ಮೇಲೆಯೇ ಕ್ರೂರ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದೂರುದಾರೆಯಾದ ಚಿಕ್ಕಮ್ಮಳವರು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಯಾದಗಿರಿ ಸಂಚಾರಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ರಮೇಶ್ ಹಾಗೂ ಆತನ ಸಹೋದರ ಮತ್ತು ಜೆಸ್ಕಾಂ ನೌಕರ ಲಕ್ಷ್ಮಣ್ ವಿರುದ್ಧ ಅತೀ ಕಠಿಣ ಆರೋಪಗಳನ್ನು ಹೊರ ಹಾಕಿದ್ದಾರೆ.
ಮಹಿಳೆಯ ದೂರಿನ ಪ್ರಕಾರ, ಕಳೆದ ಏಳು ವರ್ಷಗಳಿಂದ ಇಬ್ಬರೂ ನಿರಂತರವಾಗಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತ ಬಂದಿದ್ದಾರೆ. ತಾನು ತಡೆಯಲು ಯತ್ನಿಸಿದಾಗ ಪ್ರಾಣಹಾನಿಯ ಬೆದರಿಕೆ ಹಾಕಿ ದೌರ್ಜನ್ಯ ಮುಂದುವರಿಸುತ್ತಿದ್ದರು. ಇದು ಒಂದೇ ಬಾರಿಯ ಘಟನೆ ಅಲ್ಲದೆ, ಹಲವು ವರ್ಷಗಳ ಕಾಲ ನಿರಂತರವಾಗಿ ನಡೆದಿರುವುದರಿಂದ ಪ್ರಕರಣ ಇನ್ನಷ್ಟು ಗಂಭೀರವಾಗಿದೆ.
ಇದಲ್ಲದೆ, ತನ್ನ ಮಗಳಿಗೆ ಅಶ್ಲೀಲ ಸ್ವರೂಪದ ವಾಟ್ಸಪ್ ಸಂದೇಶಗಳನ್ನು ಕಳುಹಿಸುತ್ತಿದ್ದರು. ಫೋನ್ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆಗೊಳಪಡಿಸುತ್ತಿದ್ದರು. ಕೆಲ ಸಂದರ್ಭಗಳಲ್ಲಿ “ಬಟ್ಟೆ ಬಿಚ್ಚಿ ಬೆತ್ತಲೆ ದೇಹವನ್ನು ತೋರಿಸಬೇಕು” ಎಂದು ಪೀಡನೆ ನಡೆಸುತ್ತಿದ್ದರೆಂದು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇಂತಹ ಅಮಾನವೀಯ ವರ್ತನೆಯಿಂದಾಗಿ ದೂರುದಾರೆಯು ಕಷ್ಟಕರ ಪರಿಸ್ಥಿತಿಯಲ್ಲಿದ್ದರೂ ಧೈರ್ಯ ತೋರಿಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ದೂರು ಹಿನ್ನೆಲೆಯಲ್ಲಿ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ನಂಬಿಕೆಗೆ ದ್ರೋಹ ಮಾಡಿದ ಆರೋಪಿಗಳು ಕಾನೂನಿನ ಮುಂದೆ ನಿಲ್ಲಬೇಕಾಗಿದೆ.