ಚಿತ್ರದುರ್ಗ: ಆತ ಮದ್ವೆಯಾಗಿ ಸುಖಿ ಸಂಸಾರ ನಡೆಸಬೇಕೆಂಬ ಕನಸು ಕಂಡವನು. ಆದ್ರೆ ಎರಡು ಮದ್ವೆಯಾದ್ರೂ ಪತ್ನಿಯರೊಂದಿಗೆ ಸಂಸಾರ ಮಾಡುವ ಭಾಗ್ಯ ಇಲ್ಲದೇ ಕೊಲೆಯಾಗಿದ್ದಾನೆ. ಪ್ರೀತಿ ಮದುವೆಯಾಗಿದ್ದ 46 ವರ್ಷದ ಮಂಜುನಾಥನನ್ನು ಯುವತಿಯ ಪೋಷಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪಕ್ಕದ ಮನೆಯ ಯುವತಿ ಪ್ರೀತಿಯ ಬಲೆಗೆ ಬಿದ್ದಿದ್ದ ಮಂಜುನಾಥ್, ಓಡಿ ಹೋಗಿ ಆಕೆಯೊಂದಿಗೆ ಮದುವೆ ಮಾಡಿಕೊಂಡಿದ್ದ. ಆದ್ರೆ, ಯುವತಿ ಪೋಷಕರು ಕರೆ ಮಾಡಿ ಎಲ್ಲರ ಸಮ್ಮುಖದಲ್ಲೇ ಮದ್ವೆ ಮಾಡಿಕೊಡುವುದಾಗಿ ಯುವತಿಯನ್ನು ಪುಸಲಾಯಿಷಿ ಮನೆಗೆ ಕರೆಯಿಸಿದ್ದಾರೆ. ಬಳಿಕ ಯುವತಿಯ ಪೋಷಕರು, ಮಂಜುನಾಥನ ಜೀವ ತೆಗೆದಿದ್ದಾರೆ.
ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದ ಮಂಜುನಾಥ್ ನಿಗೆ ಸುಮಾರು 46 ವರ್ಷ ವಯಸ್ಸು. ಆರೇಳು ವರ್ಷಗಳ ಹಿಂದೆ ಶಿಲ್ಪಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಆದ್ರೆ, ಮಂಜುನಾಥನ ಹೆಸರು ಬರೆದಿಟ್ಟು ದಾವಣಗೆರೆಯ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಹಿನ್ನೆಲೆಯಲ್ಲಿ ಮಂಜುನಾಥನಿಗೆ ಆರು ವರ್ಷ ಶಿಕ್ಷೆ ಆಗಿತ್ತು.
15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ
ಬಳಿಕ ಮಂಜುನಾಥ್, ಹೈಕೋರ್ಟ್ ನಲ್ಲಿ ಜಾಮೀನು ಪಡೆದು ಹೊರ ಬಂದು ಕೃಷಿ ಮಾಡಿಕೊಂಡಿದ್ದ. ಈ ನಡುವೆ ಕಳೆದೊಂದು ವರ್ಷದಿಂದ ಪಕ್ಕದ ಮನೆಯ ಯುವತಿ ಜತೆ ಪ್ರೇಮಾಂಕುರ ಆಗಿದೆ. ಆದ್ರೆ, ಯುವತಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು.
ಆದರೂ ಸಹ ಯುವತಿ ಪೋಷಕರ ವಿರೋಧ ಕಾರಣಕ್ಕೆ ಮನೆಬಿಟ್ಟು ಹೋಗಿ ಮದುವೆ ಆಗಲು ನಿರ್ಧರಿಸಿದ್ದಳು. ಈ ಹಿನ್ನೆಲೆಯಲ್ಲಿ ಮನೆಯಲ್ಲಿರಲು ಆಗುತ್ತಿಲ್ಲ ನಿನ್ನ ಬಿಟ್ಟು ಬದುಕಲಾಗದು. ನನ್ನ ಕರೆದುಕೊಂಡು ಹೋಗು ಎಂದು ಯುವತಿ ಮಂಜುನಾಥ್ ಗೆ ಕರೆ ಮಾಡಿ ಹೇಳಿದ್ದಳು. ಅದರಂತೆ ಅಕ್ಟೋಬರ್ 7ರಂದು ಮಂಜುನಾಥ್.
ಯುವತಿಯನ್ನು ಕರೆದುಕೊಂಡು ಊರು ಬಿಟ್ಟು ಓಡಿ ಹೋಗಿದ್ದ. ಬಳಿಕ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿಯ ಹೊಸಗುಡ್ಡದ ದೇಗುಲದಲ್ಲಿ ಮದುವೆ ಆಗಿದ್ದರು.
ಮದ್ವೆ ಮಾಡಿಕೊಡುವುದಾಗಿ ಕರೆಯಿಸಿ ಹತ್ಯೆ: ಇತ್ತ ಯುವತಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಠಾಣೆಗೆ ಆಗಮಿಸಿದ ವೇಳೆ ಪೋಷಕರು ಇಪ್ಪತ್ತು ದಿನದಲ್ಲಿ ಸಾಂಪ್ರದಾಯಿಕವಾಗಿ ಅದ್ಧೂರಿ ಮದುವೆ ಮಾಡಿಕೊಡುವುದಾಗಿ ಹೇಳಿ ನಂಬಿಸಿದ್ದರು.
ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ
ರಾಜಿ ಪಂಚಾಯತಿ ಮಾಡಿ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಕೆಲ ದಿನ ಚಿತ್ರದುರ್ಗದಲ್ಲೇ ಇರಲು ನಿರ್ಧರಿಸಿದ ಮಂಜುನಾಥ್, ಮಲ್ಲಾಪುರ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದನು. ಆದ್ರೆ, ಯುವತಿ ಕಡೆಯಿಂದ ಪೋಷಕರು ಮಂಜುನಾಥ್ ಗೆ ಕರೆ ಮಾಡಿ ಊರಿಗೆ ಬರುವಂತೆ ಹೇಳಿಸಿದ್ದರು.
ಮತ್ತೊಂದು ಕಡೆ ಮಂಜುನಾಥ್ ಗೆ ಬೆದರಿಸುವ ಕೆಲಸವೂ ನಡೆಸಿದ್ದರು. ಕೊನೆಗೂ ನವೆಂಬರ್ 28 ಸಂಜೆ ವೇಳೆ ಮಂಜುನಾಥ್ ಊರಿಗೆ ಬಂದಿದ್ದಾನೆ. ಇದನ್ನು ತಿಳಿದ ಯುವತಿ ಪೋಷಕರು ಮನೆಗೆ ನುಗ್ಗಿ ಮಂಜುನಾಥನ ಮೇಲೆ ಆಯುಧಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಮಂಜುನಾಥ ಮನೆಗೆ ಬಂದು ತಂದೆ, ತಾಯಿ ಭೇಟಿಯಾಗಿ ಮಾತಾಡುವಷ್ಟರಲ್ಲೇ ಯುವತಿ ತಂದೆ ಜಗಧೀಶ್ ಮತ್ತು ಇಪ್ಪತ್ತು ಜನ ಸಂಬಂಧಿಕರ ಗುಂಪು ಕಣಿಗೆ, ಸಲಾಕೆ, ಹಾರಿ ಕೈಲಿಡಿದು ಮನೆಗೆ ನುಗ್ಗಿ ದಾಂಧಲೆ ಮಾಡಿದೆ.
ಮನೆಯಿಂದ ಹೊರಗೆಳೆದು ಮನಸೋ ಇಚ್ಛೆ ಹಲ್ಲೆ ನಡೆ ನಡೆಸಿದೆ. ಪರಿಣಾಮ ತೀವ್ರ ಗಾಯಗೊಂಡ ಮಂಜುನಾಥ್ ನನ್ನು ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಅಸುನೀಗಿದ್ದಾನೆ. ಇನ್ನು ಮಗ ರಕ್ಷಣೆಗೆ ಹೋಗಿದ್ದ ತಂದೆ ಚಂದ್ರಪ್ಪ, ತಾಯಿ ಅನಸೂಯಮ್ಮ ಮೇಲೂ ಕಲ್ಲು, ಕಣಿಗೆಗಳಿಂದ ಭೀಕರ ಹಲ್ಲೆ ಮಾಡಿ ಕಟ್ಟಿ ಹಾಕಲು ಯತ್ನಿಸಿದ್ದಾರೆ.
ಕೊಲೆಗೆ ಕಾರಣವೇನು?
ತಂದೆ ಚಂದ್ರಪ್ಪ, ತಾಯಿ ಅನಸೂಯಮ್ಮ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ ಅಕ್ಕಪಕ್ಕದ ಮನೆಯವರು.
ಆದ್ರೆ, ಯುವತಿಗೆ 19ವರ್ಷ , ಮದುವೆಯಾದ ವ್ಯಕ್ತಿಗೆ 46 ವರ್ಷ. ಅಲ್ಲದೆ ಮೊದಲು ಪ್ರೀತಿಸಿ ಮದುವೆಯಾದವಳು ಆತ್ಮಹತ್ಯೆಗೆ ಶರಣಾಗಿದ್ದು ಮಂಜುನಾಥ್ ವಿರುದ್ಧ ಕೇಸ್ ನಡೆಯುತ್ತಿದೆ. ಈ ಎಲ್ಲಾ ಕಾರಣಕ್ಕೆ ಯುವತಿಯ ಪೋಷಕರ ವಿರೋಧ ಇತ್ತು. ಹೀಗಾಗಿ, ದ್ವೇಷದಿಂದ ಯುವತಿ(ರಕ್ಷಿತಾ) ಕುಟುಂಬಸ್ಥರು ಮಂಜುನಾಥ್ ನ ಹತ್ಯೆ ಮಾಡಿದ್ದಾರೆ. ಅಲ್ಲದೇ ತಂದೆ , ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.