ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ

ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ

65 ವರ್ಷದ ಕಸ್ತೂರಿ ರಂಗಪ್ಪ ಅವರು ಪಡಿತರ ಪಡೆಯಲು ಹೋಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿ ಅವರ ಪತ್ನಿ ಜಯಮ್ಮ (58) ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.

ಸಾವಿನಲ್ಲೂ ದಂಪತಿ  ಒಂದಾಗಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ನಡೆದಿದೆ. ಕಸ್ತೂರಿ ರಂಗಪ್ಪ (65) ಮತ್ತು ಜಯಮ್ಮ (58) ಮೃತ ದಂಪತಿ. ಸದ್ಯ ಸಂಬಂಧಿಕರು ದಂಪತಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಕಸ್ತೂರಿ ರಂಗಪ್ಪ ಹೋಗಿದ್ದಾರೆ. ಈ ವೇಳೆ ಕುಸಿದುಬಿದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನು ಪತಿ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಪತ್ನಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಜಯಮ್ಮ ಕುಸಿದುಬಿದ್ದು ಅವರು ಕೂಡ ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ.

ಇದನ್ನೂ ಓದಿ: ಗುಂಡು ಹಾರಿಸಿ ಸಿನಿಮಾ ನಿರ್ದೇಶಕನಿಗೆ ಬೆದರಿಕೆ, ನಟ ಬಂಧನ

ಪತ್ನಿ ತವರಿಗೆ ಹೋಗಿದ್ದಕ್ಕೆ ಆತ್ಮಹತ್ಯೆ:

ನೆಲಮಂಗಲ: ಪತ್ನಿ ತವರು ಸೇರಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಧರ್ಮನಾಯಕ ತಾಂಡಾದಲ್ಲಿ ನಾಗೇಶ್ (26) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕ್ಷುಲ್ಲಕ ಕಾರಣಕ್ಕೆ ತವರು ಸೇರಿದ್ದ ನಾಗೇಶ್ ಪತ್ನಿ ಜ್ಯೋತಿಗೆ ರಾತ್ರಿ ಕರೆಮಾಡಿದರೂ ಮನೆಗೆ ಬಂದಿರಲಿಲ್ಲ. ಇದೇ ಕಾರಣಕ್ಕೆ ಆ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ರೂಂನಲ್ಲಿ ನಾಗೇಶ್ ನೇಣಿಗೆ ಶರಣಾಗಿದ್ದಾರೆ.

4 ವರ್ಷದ ಹಿಂದೆ ಜ್ಯೋತಿಯನ್ನು ಮದುವೆಯಾಗಿದ್ದ ನಾಗೇಶ್ ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ 3 ವರ್ಷದ ಮಗು ಜೊತೆ ಜ್ಯೋತಿ ತವರು ಸೇರಿದ್ದರು. ರಾತ್ರಿ ಕರೆ ಮಾಡಿದರೂ ಜ್ಯೋತಿ ಮನೆಗೆ ಬಂದಿರಲಿಲ್ಲ. ಡೇತ್​ಡೇ ಎಂದು ಸ್ಟೇಟಸ್ ಹಾಕಿ ನಾಗೇಶ್​​​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಗುಂಡು ಹಾರಿಸಿ ಸಿನಿಮಾ ನಿರ್ದೇಶಕನಿಗೆ ಬೆದರಿಕೆ, ನಟ ಬಂಧನ

‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟ ತಾಂಡವ್ ರಾಮ್ ಅನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪ ತಾಂಡವ್ ಮೇಲಿದೆ.

‘ಮುಗಿಲ್ ಪೇಟೆ’ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ಮೇಲೆ ನಟ ತಾಂಡವ್ ರಾಮ್ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಚಂದ್ರಾ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಪೊಲೀಸರು ಬಂದಿಸಿದ್ದಾರೆ. ತಾಂಡವ್ ರಾಮ್ ಕೆಲ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶನ ಮಾಡುತ್ತಿದ್ದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಭರತ್, ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ತಾಂಡವ್ ರಾಮ್ ನಟಿಸುತ್ತಿದ್ದರು. ಆದರೆ ಆ ಸಿನಿಮಾವನ್ನು ಭರತ್ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ತಾಂಡವ್ ರಾಮ್, ನಿರ್ದೇಶಕ ಭರತ್​ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಒಂದು ಸುತ್ತು ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಬಂಧಿಸಲಾಗಿದೆ.

‘ಮುಗಿಲ್ ಪೇಟೆ’ ಸಿನಿಮಾವನ್ನು ಭರತ್ ನಿರ್ದೇಶನ ಮಾಡಿದ್ದರು. ಇನ್ನು ತಾಂಡವ್ ರಾಮ್, ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಎಂ ಚೈತನ್ಯ ಅವರ ‘ಅಬ್ಬಬ್ಬ’ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ತಾಂಡವ್ ರಾಮ್ ಅನ್ನು ಕೊಲೆ ಯತ್ನ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪರವಾನಗಿ ಹೊಂದಿದ್ದ ಅವರ ಬಂದೂಕನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿದ್ದ ‘ದೇವನಾಂಪ್ರಿಯ’ ಹೆಸರಿನ ಸಿನಿಮಾ ಸೆಟ್ಟೇರಿತ್ತು, ಸಿನಿಮಾ ಅನ್ನು ನಿರ್ದೇಶಕ ಭರತ್ ನಾವುಂಡ ನಿರ್ದೇಶನ ಮಾಡುತ್ತಿದ್ದರು. ಸಿನಿಮಾ ಪ್ರಾರಂಭ ಆಗಿ ಎರಡು ವರ್ಷಗಳಾಗಿತ್ತು. ಆದರೆ ಸಿನಿಮಾವನ್ನು ಭರತ್ ನಿಲ್ಲಿಸಿಬಿಟ್ಟಿದ್ದರಂತೆ. ಸಿನಿಮಾ ನಿರ್ದೇಶನಕ್ಕೆಂದು ಭರತ್​ಗೆ ಆರು ಲಕ್ಷ ರೂಪಾಯಿ ಹಣವನ್ನು ತಾಂಡವ್ ನೀಡಿದ್ದರು. ಅದನ್ನು ವಾಪಸ್ ಕೇಳಿದ್ದರು ತಾಂಡವ್, ನಿನ್ನೆ (ನವೆಂಬರ್ 18) ‘ದೇವನಾಂಪ್ರಿಯ’ ಸಿನಿಮಾದ ನಿರ್ಮಾಪಕ ಕುಮಾರಸ್ವಾಮಿ ಎಂಬುವರ ಚಂದ್ರಾಲೇಔಟ್​ನ ಕಚೇರಿಯಲ್ಲಿ ಭರತ್ ಅನ್ನು ಕರೆಸಿ ಮೀಟಿಂಗ್ ಮಾಡಲಾಗಿತ್ತು. ಈ ವೇಳೆ ತಾಂಡವ್, ನಿರ್ದೇಶಕ ಭರತ್ ಬಳಿ ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾಂಡವ್ ಬೆದರಿಕೆ ಹಾಕಿದ್ದಾರೆ. ಗುಂಡು ಹಾರಿಸಿ ಹತ್ಯೆಗೂ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

Spread the love

Leave a Reply

Your email address will not be published. Required fields are marked *