ನಡುರಸ್ತೆಯಲ್ಲಿ ಟ್ರಾಕ್ಟರ್ ನಿಲ್ಲಿಸಿ ಕಸ ಸಂಗ್ರಹ: ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ನಡುರಸ್ತೆಯಲ್ಲಿ ಟ್ರಾಕ್ಟರ್ ನಿಲ್ಲಿಸಿ ಕಸ ಸಂಗ್ರಹ: ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ನಗರ ಸ್ವಚ್ಛವಾಗಿಡುವುದು ನಗರಸಭೆ ಅಥವಾ ಆಯಾ ಸ್ಥಳೀಯ ಸಂಸ್ಥೆಯ ಆದ್ಯ ಕರ್ತವ್ಯ, ಈ ಕೆಲಸವನ್ನ ಪೌರ ಕಾರ್ಮಿಕರು ಕಾಯ ವಾಚ ಮನಸ ಮಾಡುತ್ತಿದ್ದಾರೆ. ಬಸವಣ್ಣನವರು ಹೇಳಿದ ಹಾಗೆ ಕಾಯಕದಲ್ಲೇ ಕೈಲಾಸ ಕಾಣುತ್ತಿದ್ದಾರೆ, ಅದರೊಟ್ಟಿಗೆ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ತಮ್ಮ ಅನನ್ಯ ಕೊಡುಗೆಯಾನ ನೀಡುತ್ತಿದ್ದಾರೆ

ಅವರ ಕರ್ತವ್ಯದ ಬಗ್ಗೆ ಬೆರಳು ಮಾಡಿ ತೋರಿಸುವ ಹಾಗಿಲ್ಲ, ಅವರಿಗೆ ಪೌರಆಡಳಿತ ಇಲಾಖ ಅಧಿಕಾರಿಗಳು ಸೂಕ್ತ ಬೆಂಬಲ ಹಾಗೂ ಸಹಕಾರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಆದ್ರೆ ಕೆಲವರು ಮಾಡುವ ಕೆಲಸಕ್ಕೆ ಇಡೀ ಇಲಾಖೆ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ತಮ್ಮ ಅಹಂಕಾರದಿಂದ ಇಲಾಖೆಗೆ ಕೆಟ್ಟ ಹೆಸರು ತರುತ್ತಿದ್ದಾರೆ.

ನೆಲಮಂಗಲ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಘಟನೆ ಟ್ರ್ಯಾಕ್ಟರ್ ಚಾಲಕನ ಪೌರ ಕಾರ್ಮಿಕರ ಮೇಲಿನ ಅಭಿಪ್ರಾಯ ಭಿನ್ನಾವಾಗುವಂತೆ ಮಾಡುತ್ತದೆ. ಹೌದು ಪ್ರತಿದಿನ ರಾತ್ರಿ ನಗರಸಭೆ ವ್ಯಾಪ್ತಿಯ ಅಂಗಡಿಗಳಲ್ಲಿ ಕಸ ಸಂಗ್ರಹ ಮಾಡುವುದು ವಾಡಿಕೆ. ಆದ್ರೆ ಕಸ ಸಂಗ್ರಹಿಸುವಾಗ ಟ್ರ್ಯಾಕ್ಟರ್ ಚಾಲಕರ ನಡವಳಿಕೆಯಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ

ಬಿಹೆಚ್ ರಸ್ತೆಯಲ್ಲಿ ಕಸ ಸಂಗ್ರಹಿಸುವಾಗ ತಮ್ಮ ಟ್ರ್ಯಾಕ್ಟರ್ ಗಳನ್ನ ರಸ್ತೆ ಬದಿಗೆ ನಿಲ್ಲಿಸದೆ ರಸ್ತೆ ಮದ್ಯೆಯೇ ನಿಲ್ಲಿಸುತ್ತಿದ್ದಾರೆ. ಆಯಕಟ್ಟಿನ ಪ್ರದೇಶಗಳಲ್ಲಿ ಅಂದರೆ ಬಸ್ ನಿಲ್ದಾಣದಂತಹ ಜಾಗಗಳಲ್ಲಿ, ಕಿರಿದಾದ ರಸ್ತೆಗಳಲ್ಲಿ ರಸ್ತೆ ಮದ್ಯೆಯೇ ಟ್ರ್ಯಾಕ್ಟರ್ ನಿಲ್ಲಿಸಿ ಸಂಚಾರ ದಟ್ಟನೆಗೆ ಕಾರಣಕರ್ತರು ಆಗುತ್ತಿದ್ದಾರೆ. ಯಾರು ಎಷ್ಟೇ ಹಾರನ್ ಮಾಡಿದರು ಟ್ರ್ಯಾಕ್ಟರ್ ಅನ್ನು ಪಕ್ಕಕ್ಕೆ ಸರಿಸುವ ಕೆಲಸ ಮಾಡುವುದಿಲ್ಲ ಇದರಿಂದ ಪೀಕ್ ಅವರ್ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕಾರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕಿದೆ

Spread the love

Leave a Reply

Your email address will not be published. Required fields are marked *