Devanahalli: ಹೆಂಡತಿಯ ಶೀಲ ಶಂಕಿಸಿ ಗಂಡನಿಂದ ಕೊಲೆ: ಹೆಂಡತಿ ಮಾಡಿದ್ದಾದರು ಏನು?

ದೇವನಹಳ್ಳಿ: ಗಂಡ ಹೆಂಡತಿ ಜಗಳ‌ ಉಂಡು ಮಲಗೋ ವರೆಗೆ ಎನ್ನುವ ಗಾದೆ ಮಾತಿದೆ. ಆದರೆ ಇಲ್ಲೊಬ್ಬ ೧೨ ವರ್ಷ ದಾಂಪತ್ಯ ಜೀವನ ಕಳೆದು, ಈಗ ಹೆಂಡತಿ ಶೀಲ ಶಂಕಿಸಿ, ಮನಸೋಯಿಚ್ಚೆ ತಿವಿದು ತಿವಿದು ಸಾಯಿಸಿರುವ ಘಟನೆ ನಡೆದಿದೆ. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಘಟನೆಯ ಬಗ್ಗೆ ಪೊಲೀಸರಿಗೆ ವಿವರವಾಗಿ ಹೇಳುತ್ತಿದೆ ಮಗು, ಈ ಎಲ್ಲಾ ಘಟನೆಗಳು ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಎಂಬ ಗ್ರಾಮದಲ್ಲಿ.

೧೨ ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ರಜನಿಯನ್ನು ಆಂಜಿನಪ್ಪ ಎಲ್ಲರ ಸಮ್ಮುಖದಲ್ಲಿ ಮದುವೆಯಾದ. ಇವರಿಬ್ಬರ ದಾಂಪತ್ಯ ಒಂದು ಗಂಡು, ಒಂದು ಹೆಣ್ಣು ಮಗು ಕೂಡ ಇದೆ. ಹೀಗೆ ೧೨ ವರ್ಷ ದಾಂಪತ್ಯ ಜೀವನ ಸಾಗಿಸಿದ ಇಬ್ಬರು, ಒಂದೂವರೆ ವರ್ಷದಿಂದ ಜಗಳ ಆರಂಭವಾಗಿದೆ. ಈ ಜಗಳ ಇಂದು ಕೊಲೆಯಲ್ಲಿ ಅಂತ್ಯವಾಗಿದೆ‌.

ಇದನ್ನೂ ಓದಿ: ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಲೆಗೆ ಕಾರಣ: ಇನ್ನೂ ಜಗಳಕ್ಕೆ ಪ್ರಮುಖ ಕಾರಣ ಒಂದೂವರೆ ವರ್ಷದ ಹಿಂದೆ ಮನೆಯ ಬಾಡಿಗೆಗೆ ಶೇಖರ್ ಎಂಬಾತ ಬಂದ. ಆಗಿನಿಂದ ಮುನಿಆಂಜಿನಪ್ಪಗೆ ಇಬರಿಬ್ಬರ ಮೇಲೆ ಅನುಮಾನ. ಶಂಕರ್ ಮತ್ತು ರಜಿನಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ಪಡುತ್ತಿದ್ದ. ಹೀಗಾಗಿ ತನ್ನ ಹೆಂಡತಿ ಮೇಲೆ‌ ಅನುಮಾನ ಪಟ್ಟು ಆಕೆಯನ್ನು, ದಾರ ಕತ್ತರಿಸುವ ಕತ್ತರಿಯಿಂದ ಚುಚ್ಚಿ, ಚುಕ್ಕಿ ಕೊಲೆ ಮಾಡಿದ್ದಾ‌ನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಜನಿಯನ್ನು ಕುಟುಂಬಸ್ಥರು, ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಜನಿ ಮೃತಪಟ್ಟಿದ್ದಾಳೆ. ಹೆಂಡತಿಯ ಮೇಲೆ ಸಂಶಯ ಪಟ್ಟು ಹೊಟ್ಟೆ ಮತ್ತು ಕುತ್ತಿಗೆಯ ಭಾಗಕ್ಕೆ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ ಮುನಿಆಂಜಿನಪ್ಪನ್ನು ದೇವನಹಳ್ಳಿ ಪೋಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Related posts

Leave a Comment