ಒಂದೇ ದಿನ ಹೃದಯಘಾತದಿಂದ ಇಬ್ಬರು ಪೊಲೀಸರು ಸಾವು: ಇಲಾಖೆಯಲ್ಲಿ ಹೆಚ್ಚಳವಾಗುತ್ತಿದೆ ಸಾವಿನ ಸಂಖ್ಯೆ

ಬೆಂಗಳೂರು: ಅಧಿಕ ಕೆಲಸದೊತ್ತಡ ಮನುಷ್ಯನ ಆರೋಗ್ಯದ ಮೇಲೆ ಸುಷ್ಪರಿಣಾಮ‌ ಬೀರುವುದಂತು ಸತ್ಯ, ವೈಜ್ಞಾನಿಕ ಸಂಶೋಧನೆಗಳಲ್ಲಿಯೂ ಈ ಅಂಶ ಗುರುತಿಸಲಾಗಿದೆ. ಕೆಲಸದೊತ್ತಡದಿಂದ ರಕ್ತದೊತ್ತಡ ಮಧುಮೇಹದಂತಗ ಹಲವು ಕಾಯಿಲೆಗಳು ಮನುಷ್ಯನಿಗೆ ಒಕ್ಕರಿಸಲಿದ್ದು, ಈ ಎರಡೇ ಕಾಯಿಲೆಗಳು ಮನುಷ್ಯನಿಗೆ ಯಾವ ಕಾಯಿಲೆ ಬೇಕಾದರು ಬರುವಂತೆ ಮಾಡುತ್ತದೆ ಅಲ್ಲದೆ ಅನೇಕ ಕಾಯಿಲೆಗಳಿಗೆ ಈ ಬಿಪಿ ಶುಗರ್ ಮೂಲಬೇರು ಎನ್ನುತ್ತೆ ವೈದ್ಯ ಲೋಕ.

ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು ಖಾಲಿಯಿದ್ದು ಕಡಿಮೆ ಸಿಬ್ಬಂದಿಗೆ ಹೆಚ್ಚು ಕೆಲಸ ಇರುವುದರಿಂದ ಬಿಪಿ ಶುಗರ್‌ಗೆ ಪೊಲೀಸ್ ಇಲಾಖೆಯಲ್ಲೂ ಅನೇಕ ಅಧಿಕಾರಿಗಳು ಸಿಬ್ಬಂದಿಗಳು ತುತ್ತಾಗಿದ್ದಾರೆ. ಹೃದಯಸಂಬಂಧಿ ಕಾಯಿಲೆಗಳಿಗೂ ಬಲಿಯಾಗುತ್ತಿದ್ದು ನೆನ್ನೆ ಒಂದೇ ದಿನ ಇಬ್ಬರು ಪೊಲೀಸರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಹಲಸೂರ್ ಗೇಟ್ ಸಂಚಾರಿ ಠಾಣೆ ಎಎಸ್ಐ ರಾಮಾಂಜಿನೇಯ, ನಗರ ಸಶಸ್ತ್ರ ಮೀಸಲು ದಳದ ಕಾನ್ಸ್‌ಟೇಬಲ್ ಅರುಣ್ ಕೊರಬರ್ ಇಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವುದು ಮೃತರ ಕುಟುಂಬಸ್ಥರಿಗೆ ಬರಿಸಲಾಗದ ನಷ್ಟು ಉಂಟಾಗಿದ್ದು ಪೊಲೀಸ್ ಇಲಾಖೆ ಶೋಕದಲ್ಲಿದೆ.

ಕ್ಯಾನ್ಸರ್ ಕಾರಣದಿಂದ ಸಾವನ್ನಪ್ಪಿದ್ದ ಪೊಲೀಸ್:

ಜೂನ್ 15 ರಂದು ಬೆಂಗಳೂರಿನಲ್ಲಿ ಮತ್ತೋಂದು ಸಾವಿನ‌ ಪ್ರಕರಣ‌ ದಾಖಲಾಗಿತ್ತು, ಅಶೋಕನಗರ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಕುಮಾರ್ ತಾನು ವಾಸವಿದ್ದ ಕ್ವಾಟ್ರಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಕುಮಾರ್  ನನ್ನಿಂದ ಮಗಳಿಗೂ ಕಾಯಿಲೆ ಹರಡಿದೆ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಮಾರ್‌ರಿಂದ ತಮ್ಮ ಮಗಳಿಗೂ ಕ್ಯಾನ್ಸರ್ ರೋಗ ಹರಡಿತ್ತು ಎನ್ನಲಾಗುತ್ತಿದೆ, ತಾನು ಚಿಕಿತ್ಸೆ ಪಡೆಯೋ ಜೊತೆಯಲ್ಲಿ ಸಹ ಮಗಳಿಗೆ ಟ್ರೀಟ್ಮೆಂಟ್ ಕೊಡಿಸಿದ್ದರು. ಕುಮಾರ್ ಮಗಳು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದರು.ಆದರು ಸಹ ನನ್ನಿಂದಲೇ ಮಗಳಿಗೆ ಕ್ಯಾನ್ಸರ್ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಹ ಕ್ಯಾನ್ಸರ್ ಕಾರಣದಿಂದ ಸಾವನ್ನಪ್ಪಿರುವ ವಿಚಾರ ಸಹ ವರದಿಯಾಗಿತ್ತು.

Related posts

One Thought to “ಒಂದೇ ದಿನ ಹೃದಯಘಾತದಿಂದ ಇಬ್ಬರು ಪೊಲೀಸರು ಸಾವು: ಇಲಾಖೆಯಲ್ಲಿ ಹೆಚ್ಚಳವಾಗುತ್ತಿದೆ ಸಾವಿನ ಸಂಖ್ಯೆ”

Leave a Comment