ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ: ತುಳಸಿರಾಮಯ್ಯ

ನೆಲಮಂಗಲ ತಾಲ್ಲೂಕು ಶಾಂತಿ ನಗರ ಗ್ರಾಮದಲ್ಲಿ ನೆಡದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಾದ ಶಿಕ್ಷಕಿ ವೀರನಾಗಮ್ಮ ನವರ ಪುತ್ರಿ ಕುಮಾರಿ ಜಯಶ್ರೀ ರವರು ಮಕ್ಕಳಿಗೆ ಉಚಿತ ವಾಗಿ ಟೈ ಬೆಲ್ಟ್, ಐ ಡಿ ಕಾರ್ಡ್ ಮತ್ತು ಟ್ರಾಕ್ ಶೂಟ್ ವಿತರಿಸಲಾಯಿತು, ಈ ಸಂದರ್ಭ ದಲ್ಲಿ ಗ್ರಾಮದ ಮುಖಂಡರಾದ ಎಂ, ತುಳಸಿ ರಾಮಯ್ಯ ನವರು ಮಾತನಾಡಿ, ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಹಣ ವ್ಯಹಿಸಿ ಸಾಲಗಾರರಾಗುತ್ತಾರೆ ಆದರೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ ದೊರಕುತಿದ್ದು ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಮಧ್ಯಾಹ್ನ ಬಿಸಿಯೂಟ ದೊರಕುತ್ತಿದೆ, ಹಾಗೂ ದಾನಿಗಳಿಂದಲೂ ಕಲಿಕೆಗೆ ಉತ್ತೇಜನ ದೊರಕುತಿದ್ದು ಇದರ ಸದುಪ ಯೋಗವನ್ನು ಪಡೆದುಕೊಂಡು ಮಕ್ಕಳು ವಿದ್ಯಾವಂತರಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಬದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಂ, ನಾಗರಾಜ್ ಸದಸ್ಯರಾದ ರಮ್ಯ, ಶ್ವೇತಾ, ಮಹಾರುದ್ರಯ್ಯ, ಹೋಟೆಲ್ ನಾಗರಾಜ್, ವೆಂಕಟೇಶ್, D B ರಘು, ಅನಂತು ಶಿಕ್ಷಕಿ ಯಾರದ ವೀರ ನಾಗಮ್ಮ, ಮಂಜುಳಾ, ಉಮ್ಮೆಸಲ್ಮಾ ಉಪಸ್ಥಿತರಿದ್ದರು

Related posts

Leave a Comment