ಗಂಡನೆದುರೇ ಪ್ರಿಯಕರನೊಂದಿಗೆ ರೂಂಗೆ ತೆರಳಿದ ಹೆಂಡತಿ: ಹೆಂಡತಿಯನ್ನ ಕೊಚ್ಚಿ ಕೊಂಡ ಗಂಡ

ದೊಡ್ಡಬಳ್ಳಾಪುರ: ಅವರಿಬ್ಬರು ಕಳೆದ 12 ದಿನಗಳಿಂದಷ್ಟೆ ಆ ಊರಿಗೆ ಬಂದಿದ್ರು ಗಂಡ ಹೆಂಡತಿ ಅಂತ ಬಾಡಿಗೆಗೆ ಮನೆಯನ್ನ ಸಹ ಪಡೆದಿದ್ದು ಎಲ್ಲವೂ ಚೆನ್ನಾಗೆ ನಡೆದುಕೊಂಡು ಹೋಗ್ತಿತ್ತು. ಆದ್ರೆ ಈ ನಡುವೆ ಮನೆಯಲ್ಲಿದ್ದ ಗೃಹಿಣಿ ನೆನ್ನೆ ಸಂಜೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬಿದ್ದಿದೆ.

ಹೌದು ಹೀಗೆ ಮನೆಗೆ ಹಾಕಿರುವ ಲಾಕ್ ಹಾಕಿದ ಹಾಗೆ ಇದೆ ಮನೆ ಬಾಗಿಲು ಸಹ ತೆಗೆದಿಲ್ಲ ಆದ್ರೆ ಒಳಗಡೆ ಹೋಗಿ ನೋಡಿದಾಗ ಮಾತ್ರ ಮನೆಯಲ್ಲಿದ್ದ ಗೃಹಿಣಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಜೀವವನ್ನೆ ಬಿಟ್ಟಿದ್ದಾಳೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ರಕ್ತದ ಮಡುವಿನಲ್ಲಿ ಒದ್ದಾಡಿ ಜೀವ ಬಿಟ್ಟಿರುವು ಈಕೆಯ ಹೆಸರು ಭಾರತಿ ಮೂಲತಃಹ ಮಧುಗಿರಿ ಳಾದ ಈಕೆ ಕೆಲಸಕ್ಕೆ ಹೋಗುವ ವೇಳೆ ಪರಿಚಯವಾಗಿದ್ದ ಹರೀಶ್ ಎಂಬುವವನ ಜೊತೆ ಪ್ರೀತಿಯ ಬಲೆಗೆ ಬಿದ್ದು ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ಲು.

ಈ ನಡುವೆ ಭಾರತಿಗೆ ಗಂಗರಾಜು ಎಂಬುವನ ಜೊತೆ ಲವ್ ಆದ್ದು ಅಲ್ಲಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡಿದ್ದ ಗಂಗರಾಜು ಜೊತೆ ಕಲೇದ 12 ದಿನಗಳಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮಕ್ಕೆ ಬಂದಿದ್ಲು. ಅಲ್ಲದೆ ಅಲ್ಲಿ ನಾವು ಗಂಡ ಹೆಂಡತಿ ಅಂತ ಹೇಳಿ ಬಾಡಿಗೆ ಮನೆಯೊಂದನ್ನ ಪಡೆದು 4 ವರ್ಷದ ಮಗು ಜೊತೆ ವಾಸವಾಗಿದ್ರಂತೆ.

ಆದ್ರೆ ಈ ವಿಚಾರ ತಿಳಿದುಕೊಂಡ ಗಂಡ ಹರೀಶ್ ಮೂರು ದಿನಗಳಿಂದೆ ಗ್ರಾಮಕ್ಕೆ ಬಂದಿದ್ದು ಮನೆಯಲ್ಲಿದ್ದ ಪತ್ನಿ ಜೊತೆ ಮಾತನಾಡಿ ನೆನ್ನೆ ಮನೆಯಲ್ಲೆ ಉಳಿದುಕೊಂಡಿದ್ದಾನೆ. ಈ ವೇಳೆ ಗಂಡ ಕುಡಿದು ಟೈಟ್ ಆಗಿದ್ದಾನೆ ಅಂತ ಗಂಡನ ಮುಂದೆಯೆ ಪ್ರಿಯಕರನ ಜೊತೆ ಕೊಠಡಿಯಲ್ಲಿ ಮಲಗಿದ್ದು ಅದನ್ನ ಗಂಡ ಹರೀಶ ನೋಡಿದ್ನಂತೆ. ಹೀಗಾಗಿ ಆಕ್ರೋಶಗೊಂಡ ಹರೀಶ್ ಪತ್ನಿ ಜೊತೆ ಜಗಳ ಮಾಡಿದ್ದು ನೆನ್ನೆ ಸಂಜೆ ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡೆದು ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇನ್ನೂ ಕೊಲೆ ಮಾಡಿದ ನಂತರ ಮಗುವನ್ನ ಕರೆದುಕೊಂಡು ಮನೆಗೆ ಚಿಲಕ ಹಾಕಿದವನೆ ನಂತರ ಸೀದಾ ತನ್ನ ಊರಿನತ್ತ ಹೊರಟಿದ್ದಾನೆ. ಇನ್ನೂ ಸಂಜೆ ಭಾರತಿಗೆ ಕರೆ ಮಾಡಿದ ಪ್ರಿಯಕರ ಗಂಗರಾಜು ಎಷ್ಟು ಭಾರಿ ಕರೆ ಮಾಡಿದ್ರು ಪೋನ್ ಪಿಕ್ ಮಾಡದ ಕಾರಣ ಸ್ನೇಹಿತ ಸುರೇಶ್ ನನ್ನ ಮನೆ ಬಳಿಗೆ ನೋಡಲು ಕಳಿಸಿದ್ದಾನೆ.

ಈ ವೇಳೆ ಭಾರತಿ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ಕಂಡ ಸುರೇಶ ನಂತರ ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ಮನೆಯಲ್ಲಿ ಕೂಡಿ ಹಾಕಿ ಮನೆ ಮಾಲೀಕರ ಸಹಾಯದದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಿಯಕರನನ್ನ ವಶಕ್ಕೆ ಪಡೆದು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದಾರೆ.

ಇನ್ನು ಪ್ರಿಯಕರ ಗಂಗರಾಜುಗೆ ಈಗಾಗಲೆ ಎರಡು ಮದುವೆಯಾಗಿ ಇಬ್ಬರನ್ನು ಕೊಲೆ ಮಾಡಿದ್ದು ಇದೀಗ ನಮ್ಮ ಮಗಳನ್ನು ಬಲಿಪಡೆದುಕೊಂಡಿದ್ದಾನೆ ಅಂತ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೂ ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

Related posts

Leave a Comment