ಭೂಕಬಳಿಕೆಯಿಂದ ಆನ್ಯಾಯ, ಸಗಣಿ ಸುರಿದುಕೊಂಡು ದಲಿತ ಕುಟುಂಬಗಳ ಪ್ರತಿಣಟನೆ

NELAMANGALA

ನೆಲಮಂಗಲ: ನಕಲಿ ದಾಖಲೆ ಸೃಷ್ಠಿಸಿ ಜಮೀನು ಕಬಳಿಕೆ ಹಿನ್ನಲೆ ನ್ಯಾಯಕ್ಕೆ ಸಗಣಿ ಸುರಿದುಕೊಂಡು ರೈತರು ಅಧಿಕಾರಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬಳಿ ಸೋಮವಾರ ಬೆಳಗ್ಗೆ ಸಮಾವೇಶಗೊಂಡÀ ತಾಲೂಕಿನ ಕೊಡಿಗೇಹಳ್ಳಿ, ಕೆಂಚನಪುರ ಗ್ರಾಮದ ರೈತರ ಜಮೀನನ್ನು ನಕಲಿ ದಾಖಲೆಯನ್ನು ಸೃಷ್ಠಿಸಿ ಭೂಕಬಳಿಕೆ ಮಾಡಿಕೊಂಡಿರುವ ಹಿನ್ನಲೆ ನ್ಯಾಯ ದೊರಕಿಸಿಕೊಡುವಂತೆ ಮೈ ಮೇಲೆ ಸಗಣಿ ಸುರಿದುಕೊಂಡು ಅಧಿಕಾರಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಇದನ್ನೂ ನೋಡಿ: ಒಲವಿನ ಪ್ರಿಯಲತೆ ಅವಳದೇ ಚಿಂತೆಹಾಡು ಹಾಡಿದ ಲೀಲಾವತಿ

ಘಟನೆ ಹಿನ್ನಲೆ: ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಕೆಂಚನಪುರ ಗ್ರಾಮದ ರೈತರಿಗೆ ಸೇರಿದ್ದ ಜಮೀನು ಓಬಳಾಪುರ ಗ್ರಾಮದ ೧೯೯/೨, ೧೯೯\೩, ೨೦೦, ಸೇರಿದಂತೆ ೮ ಸರ್ವೆಗಳ ಸುಮಾರು ೧೫.೩ಎಕರೆ ಜಮೀನನ್ನು ಕಳೆದ ೩೦ವರ್ಷಗಳ ಹಿಂದೆ ಸರ್ಕಾರ ಸಾಗುವಳಿ ಚೀಟಿಯನ್ನು ನೀಡಿತ್ತು. ಬಳಿಕ ೨೦೦೫ರಲ್ಲಿ ಹಾಗೂ ೨೦೧೦ರಲ್ಲಿ ರೈತರು ಬೆಂಗಳೂರಿನ ಬಿಳೇಕಳ್ಳಿ ನಿವಾಸಿ ಡಾ.ಕೃಷ್ಣಮೂರ್ತಿ ಎಂಬಾತರಿಗೆ ಜಮೀನನ್ನು ಜಿಪಿಎ ಮಾಡಿಕೊಟ್ಟಿದ್ದರು. ಅದ್ದರಂತೆ ೨೦೧೯ರಲ್ಲಿ ಬಿ.ಹೆಚ್.ರಮೇಶ್, ಸುಜಾತ, ಡಾ.ಕೃಷ್ಣಮೂರ್ತಿ, ಹೇಮಚಂದರ್ ಸೇರಿದಂತೆ ಅಕ್ಷಯ್‌ರವೀಂದ್ರ ಬಾಬು ಎಂಬಾರಿಗೆ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸಿ ಜಮೀನು ನೊಂದಣಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಲಗಿದ ಹಾಸಿಗೆಯಲ್ಲಿ ಮಕ್ಕಳಂತೆ ನಲಿದ ಲೀಲಮ್ಮ

ಈ ವಿಚಾರ ತಿಳಿಸುತ್ತಿದಂತೆ ರೈತರು ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬಳಿಕ ೨೦೧೯ರ ಜೂನ್‌ನಲ್ಲಿ ಸುಮಾರು ೧೫.೩ಎಕರೆಯನ್ನು ಕೆ.ಐ.ಡಿ.ಬಿ ಭೂಸ್ವಾಧಿನ ಪಡಿಸಿಕೊಂಡಿದ್ದು ಪ್ರತಿ ಎಕರೆಗೆ ೧.೧೦ಕೋಟಿ ಹಣವನ್ನು ನೀಡುವಂತೆ ಆದೇಶ ಮಾಡಿದ್ದಾರೆ. ಅದ್ದರಿಂದ ಕಳೆದ ೮ವರ್ಷದಿಂದ ರೈತರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನೀನು ನನ್ನ ಅಮ್ಮ, ಮುತ್ತಿಟ್ಟ ವಿನೋದ್‌ಮಗನೇ ಎಂದು ದೃಷ್ಟಿ ತೆಗೆದ ಉಮಾಶ್ರೀ

ಕೊಲೆ ಬೆದರಿಕೆ: ಬೆಂಗಳೂರಿನ ಬಿ.ಹೆಚ್.ರಮೇಶ್, ಕೃಷ್ಣಮೂರ್ತಿ ಜಮೀನು ವಿಚಾರವಾಗಿ ಸಾಕಷ್ಟು ಬಾರಿ ಕೊಲೆ ಬೆದರಿಕೆ ಹಾಕಿದ್ದಾರೆ. ಸುಮಾರು ೫೦ಕ್ಕೂ ಹೆಚ್ಚು ಬಾರಿ ದೂರುಗಳು ಪೊಲೀಸ್, ತಹಸೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೀಲಾವತಿ ಮನೆಯಲ್ಲಿ ಡಾ.ರಾಜ್‌ ಪೋಟೋಕಥೆ ಕೇಳಿ ಉಮಾಶ್ರೀ ಏನಂದ್ರು?

ಗ್ರಾಮದ ಮುಖಂಡ ಕೃಷ್ಣಪ್ಪ ಮಾತನಾಡಿ ತಾಲೂಕಿನ ಕೊಡಿಗೇಹಳ್ಳಿ, ಕೆಂಚನಪುರ ಗ್ರಾಮದ ಸುಮಾರು ೩೦ಕ್ಕೂ ಹೆಚ್ಚು ಕುಟುಂಬಗಳು ಜಮೀನು ನಂಬಿಕೊAಡು ಜೀವನ ನಡೆಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿ ಜಮೀನು ಕಬಳಿಕೆ ಮಾಡಿದ್ದ ಹಿನ್ನಲೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ೨೦೨೨ರ ಆಕ್ಟೋಬರ್ ೨೦ಂದು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡಿದ್ದು ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದ ಹಿನ್ನಲೆ ಸತ್ಯಾಗ್ರಹವನ್ನು ಕೈಬಿಡಲಾಗಿತ್ತು. ಸುಮಾರು ೧೦ ತಿಂಗಳು ಕಳೆದರೂ ಅಧಿಕಾರಿಗಳು ನ್ಯಾಯ ನೀಡಿಲ್ಲ. ಅದ್ದರಿಂದ ಅಧಿಕಾರಿಗಳ ವಿರುದ್ಧ ಸಗಣಿ ಸುರಿದುಕೊಂಡು ಪ್ರತಿಭಟನೆ ಮಾಡಲಾಗುತ್ತಿದೆ. ಕೂಡಲೇ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ನಿವಾಸ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಇದನ್ನೂ ಓದಿ: ವಿನೋದ್‌ ಹಾಡಿಗೆ ಧ್ವನಿಗೂಡಿಸಿದ ಉಮಾಶ್ರೀ

ತಹಸೀಲ್ದಾರ್ ಪ್ರತಿಕ್ರಿಯೆ: ತಾಲೂಕಿನ ಓಬಳಾಪುರ ಗ್ರಾಮದ ಜಮೀನು ವಿಚಾರಕ್ಕೆ ಸಂಬAಧಿಸಿದ್ದ ಈಗಾಗಲೇ ದಾಖಲೆ ಪತ್ರವನ್ನು ಪರಿಶೀಲನೆ ಮಾಡಿದ್ದು ರೈತರು ನೀಡಿದ್ದ ಅರ್ಜಿಗಳು ಹೈಕೋರ್ಟ್, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ವಜಮಾಡಿ ಆದೇಶ ಹೊರಡಿಸಿದ್ದಾರೆ. ರೈತರು ನೀಡಿದ್ದ ಮನವಿಯಲ್ಲಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಕೆ.ಅರುಂಧತಿ ಪ್ರತಿಕ್ರಿಯೆ ನೀಡಿದರು.

ಸಂದರ್ಭದಲ್ಲಿ ಗ್ರಾಮಸ್ಥ ಸಿದ್ಧಗಂಗಯ್ಯ, ನಾಗರಾಜು, ಗಂಗರಾಜು, ಮಂಜುನಾಥ್, ಲಕ್ಷ್ಮಿದೇವಿ, ಪಾರ್ವತಮ್ಮ, ಲೋಕೇಶ್ ಮತ್ತಿತರರು ಉಪಸ್ಥಿತರಿದರು.

Related posts

Leave a Comment