ಗಂಡ ಬಿಟ್ಟವಳಿಗೆ ಬಾಳು ಕೊಡಲು ಬಂದ ಅತ್ತೆ ಮಗ: ಆಕೆಯನ್ನ ಗರ್ಭಿಣಿ ಮಾಡಿ ಪರಾರಿ

ಬೆಂಗಳೂರು: ಗಂಡ ಬಿಟ್ಟವಳಿಗೆ ಬಾಳು ಕೊಡುವೆ ಎಂದು ತನ್ನ ಸ್ವಂತ ಅತ್ತೆ ಮಗನೇ 6 ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಷನ್‌ಷಿಪ್ (leaving together Relationship) ಇಟ್ಟುಕೊಂಡು, ಮಹಿಳೆ ಮೂರು ತಿಂಗಳ ಗರ್ಭಿಣಿ ಮಾಡಿ, ಮನೆಯವರಿಗೆ ಮದುವೆಗೆ ಒಪ್ಪಿಸುತ್ತೇನೆ ಎಂದು ಹೋಗಿದ್ದವನು ಪರಾರಿಯಾಗಿದ್ದಾನೆ, ನ್ಯಾಯ ಕೊಡಿ ಎಂದು ಪ್ರಿಯಕರ ಮನೆ ಬಳಿ ಹೋದರೆ ಆತನ ಪೋಷಕರಿಂದ ನಿಂದನೆಗೊಳಗಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya police) ಪ್ರಕರಣ ದಾಖಲು ಮಾಡಿದ್ದಾಳೆ ಸಂತ್ರಸ್ತ ಮಹಿಳೆ.

ಇದನ್ನೂ ಓದಿ: ಒಂದೇ ದಿನ ಹೃದಯಘಾತದಿಂದ ಇಬ್ಬರು ಪೊಲೀಸರು ಸಾವು: ದಿನೇ ದಿನೇ ಹೆಚ್ಚಳವಾಗುತ್ತಿದೆ ಸಾವಿನ ಸಂಖ್ಯೆ

ಮಹಿಳೆ ಕೊಟ್ಟ ದೂರಿನಲ್ಲಿ ಕಣ್ಣಿರ ಕಥೆ: ಕಳೆದ 10 ವರ್ಷಗಳಿಂದ ಪತಿಯಿಂದ ದೂರ ಇದ್ದು ತಮ್ಮ ತಂದೆಯವರ ತಂಗಿ ಲಕ್ಕಮ್ಮ ಎಂಬುವವರ ಮಗನಾದ ಕರಣ್ ಕುಮಾರ್‌, ಚಿಕ್ಕಂದಿನಿಂದಲೂ ಪರಿಚಯವಿದ್ದು, 6 ವರ್ಷದ ಹಿಂದೆ ನಿನಗೆ ಬಾಳು ಕೊಡುತ್ತೇನೆ, ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ನಂಬಿಸಿದ್ದ ಆಗಾಗಿ ನಾನು ಒಪ್ಪಿಕೊಂಡೆನು, ಬಳಿಕ ಕರಣ್ ಕುಮಾರ್ ಮತ್ತು ನಾನು ತುಮಕೂರಿನ (Tumakuru) ಯಲಾಪುರದಲ್ಲಿ, ಬಾಡಿಗೆ ಮನೆ ಮಾಡಿಕೊಂಡು 4ವರ್ಷಗಳ ಕಾಲ ವಾಸವಿದ್ದೆವು.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸೌಜನ್ಯಳ ಅತ್ಯಾಚಾರ ಪ್ರಕರಣ: ಸಿಬಿಐ ಕೋರ್ಟ್‌ನ ವರದಿಯಲ್ಲೇನಿದೆ.

ಕರಣ್ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದ, ಮನೆಯ ಬಾಡಿಗೆ ಮತ್ತು ಸಂಸಾರಕ್ಕೆ ನಾನೇ ತಂದು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಅಲ್ಲದೆ ಮದುವೆ ಮಾಡಿಕೋ ಎಂದಿದ್ದಕ್ಕೆ, ನೀನು ಏನೂ ಯೋಚನೆ ಮಾಡಬೇಡ ನಾನು ಮದುವೆ  ಮಾಡಿಕೊಳ್ಳುತ್ತೇನೆಂದು ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ನಂಬಿಸುತ್ತಿದ್ದನು, ನಾವಿಬ್ಬರೂ ಗಂಡ ಹೆಂಡತಿಯರಂತೆ ವಾಸವಿದೆವು.

ಈಗ ಒಂದೂವರೆ ವರ್ಷಗಳ ಹಿಂದೆ ಪೀಣ್ಯಾದ ವಿದ್ಯಾನಗರದ ವಿಳಾಸಕ್ಕೆ ಬಂದು ವಾಸವಿರುತ್ತೇವೆ. ಈಗ ನನಗೆ 3 ತಿಂಗಳ ಗರ್ಭಿಣಿ. ಈ ವಿಷಯವನ್ನು ಕರಣ್ ಕುಮಾರ್ ಗೂ ಸಹ ಗೊತ್ತಿದ್ದು, ಈತನು ನಿನ್ನನ್ನು ಮದುವೆ ಮಾಡಿಕೊಳ್ಳಲು ನಮ್ಮ ಮನೆಯವರು ಒಪ್ಪುತ್ತಿಲ್ಲ ಎಂದನು, ನಾನು ಅವನಿಗೆ ನನ್ನ ಜೀವನ ಹಾಳು ಮಾಡಬೇಡ ಮದುವೆ ಮಾಡಿಕೊ ಎಂದು ಪರಿಪರಿಯಾಗಿ  ಬೇಡಿಕೊಂಡೆನು, ನಂತರ 15 ದಿನಗಳ ಹಿಂದೆ ಕರಣ್ ಕುಮಾರ್ ಮದುವೆ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿ ಬರುತ್ತೇನೆಂದು ಹೇಳಿ ನನ್ನಿಂದ 5,000/- ರೂ.ಗಳನ್ನು ಪಡೆದುಕೊಂಡು ಹೋದವನು ವಾಪಸ್ ಬರಲಿಲ್ಲ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದಂದು ಕೊಲೆ, ಶಿಷ್ಯನನ್ನೆ ಕೊಂದ ಗುರು

ನಾನು ಕರಣ್ ರವರ ಮನೆಯ ಹತ್ತಿರ ಹೋಗಿ ನನ್ನನ್ನು ಮದುವೆ ಮಾಡಿಕೊ ಎಂದು ಕೇಳಿದ್ದಕೆ ಅವರ ತಾಯಿ ಮತ್ತು ಅವರ ಮಗ ಮುರಳಿ, ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ನೀನೇನಾದರೂ ನಮ್ಮ ಏರಿಯಾಗೆ ಬಂದರೆ ನಿನ್ನ ಕೈಕಾಲು ಮುರಿಯುತ್ತೇವೆಂದು ಗಲಾಟೆ ಮಾಡಿ ಸ್ಥಳದಿಂದ ಜೋರು ಮಾಡಿ ಕಳಸಿದ್ರು, ನನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನನಗೆ ಮೋಸ ಮಾಡಿರುವ ಕರಣ್  ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುವ ಅವರ ತಾಯಿ ಸೇರಿದಂತೆ ಮನೆಯವರ ವಿರುದ್ಧ ಈಗ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ಪ್ರಕರಣ ದಾಖಲು ಮಾಡಿದ್ದಾರೆ.

Related posts

Leave a Comment