ಲಕ್ಷ ಲಕ್ಷ ಹಣವನ್ನು ತವರಿಗೆ ಕಳುಹಿಸಿದ್ದ ಪತ್ನಿ, ಸಿಟ್ಟಿಗೆದ್ದು ಹೆಂಡತಿಯನ್ನೆ ಕೊಂ*ದ ಗಂಡ.

ಆ ಸುಂದರ ಕುಟುಂಬ ಕಳೆದ ಹದಿನೇಳು ವರ್ಷದಿಂದ ಸುಖವಾಗಿ ಬಾಳುತ್ತಿದ್ದರು, ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಮೂರು ಮಕ್ಕಳು ಇದ್ರು, ಬಡತನದಲ್ಲಿದ್ದ ಕುಟುಂಬಕ್ಕೆ ಬಂದ ಕೋಟಿ ಕೋಟಿ ಹಣವೇ ಕುಟುಂಬ ಕಲಹಕ್ಕೆ ಕಾರಣವಾಗಿ, ಮನೆಯ ಯಜಮಾನಿಯನ್ನೆ ಗಂಡ ಭರ್ಬರವಾಗಿ ಕೊಂ*ದು ನೀರಿನ ಸಂಪಿನಲ್ಲಿ ಹಾಕಿದ್ದಾನೆ.

ಮನೆಯ ಮುಂದೆಯೆ ತೋಡಿರುವ ಗುಂಡಿ, ಸಂಪಿನಿಂದ ಹೊರತೆಗೆದಿರುವ ಮೃ*ತ ದೇಹ, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಸ್ಥಳ ಮಹಜರ್ ಮಾಡುತ್ತಿರುವ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ. ಇಲ್ಲಿ ನೀರಿನಲ್ಲಿ ಮು*ಳುಗಿ ಸಾ*ವನ್ನಪ್ಪಿರುವ ಮಹಿಳೆ 36 ವರ್ಷದ ಜಯಲಕ್ಷ್ಮಿ, ಈಕೆಯನ್ನ ಕೊಂ*ದು ನೀರಿನಲ್ಲಿ ಮುಳುಗಿಸಿದ್ದು ಈತನ ಪತಿ 42 ವರ್ಷದ ಶ್ರೀನಿವಾಸ್. ಸುಂದರ ಸಂಸಾರದಲ್ಲಿ ಈ ಕೊ*ಲೆಗೆ ಕಾರಣ ವಾಗಿದ್ದು ಮಾತ್ರ ಹಣ ಹಣ ಹಣ

ಕೈಗಾರಿಕಾ ಪ್ರದೇಶಕ್ಕೆ ಇವರ ಕುಟುಂಬದ ಜಮೀನು ಸ್ವಾಧೀನ!?
ಸರ್ಕಾರದಿಂದ ಪರಿಹಾರವಾಗಿ ಬಂತು ಕೋಟಿ ಕೋಟಿ ಹಣ!!
ಜಮೀನಿನಿಂದ ಬಂದ ಕೋಟಿ ಕೋಟಿ ಹಣವೆ ಕೊ*ಲೆಗೆ ಕಾರಣ!!

ಡಾಬಸ್‌‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಈ ಕುಟುಂಬಕ್ಕೆ ಸೇರಿದ್ದ ಭೂಮಿ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾದೀನವಾಗಿತ್ತು, ಇದರಿಂದ ಕೋಟಿ ಕೋಟಿ ಹಣ ಸಹ ಬಂದಿತ್ತು. ಆದ್ರೆ ಗಂಡ ಕುಡುಕ ಹಣವನ್ನೆಲ್ಲಾ ಖಾಲಿ ಮಾಡುತ್ತಾನೆ ಎಂದು ಹೆಂಡತಿ ಮೃತೆ ಜಯಲಕ್ಷ್ಮಿ ತನ್ನ ತವರೂರಾದ ರಾಮನಗರಕ್ಕೆ ಹಣ ಕಳುಹಿಸಿದ್ದಳಂತೆ. ತನ್ನ ಮಕ್ಕಳ ಭವಿಷ್ಯಕ್ಕಾಗಿ ಹಣ ಎತ್ತಿಡಲು ಹೇಳಿದ್ದಳಂತೆ. ಇದರಿಂದ ಮನನೊಂದ ಶ್ರೀನಿವಾಸ್ ನೆನ್ನೆ ಹೆಂಡತಿಯೊಂದಿಗೆ ಜಗಳ ತೆಗೆದು, ರಾತ್ರಿ ವೇಳೆಗೆ ಆಕೆಯ ತಲೆಗೆ ಹಿಂಬದಿಯಿಂದ ಬಲವಾಗಿ ಹೊಡೆದು ಬಳಿಕ ಮನೆಯ ಸಂಪಿನಲ್ಲಿ ಹಾಕಿದ್ದನಂತೆ. ಮಕ್ಕಳು ಬಂದು ಅಮ್ಮ ಎಲ್ಲಿ ಅಂದಾಗ ತನಗೆ ಗೊತ್ತಿಲ್ಲ ಎಂದಿದ್ದನಂತೆ. ತಡರಾತ್ರಿ ಮನೆಯ ಮುಂದೆ ಗುಂಡಿ ತೆಗೆಯುತ್ತಿದ್ದದ್ದನ್ನು ಗಮನಿಸಿದ್ದ ಮಕ್ಕಳು ಜೋರು ಮಾಡಿ ಕೇಳಿದಾಗ ತೆಂಗಿನಕಾಯಿ ಗಿಡ ಊಣಲು ಎಂದಿರುತ್ತಾನೆ. ಈ ನಡುವೆ ಸಂಪಿನ ಒಳಗೆ ನಾಯಿ ಬಿದ್ದಿದೆ, ಅದನ್ನ ತೆಗೆಯಬೇಡಿ ಎಂದಿದ್ದನ್ನು ಅನುಮಾನಿಸಿದ ಮಕ್ಕಳು ಬಾಗಿಲು ತೆರೆದು ನೋಡಿದಾಗ ತಾಯಿ ಶವ ನೀರಿನಲ್ಲಿ ತೇಲುತ್ತಿತ್ತಂದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.‌

Related posts

Leave a Comment