ಶಕ್ತಿ ಯೋಜನೆಯಿಂದ ತುಂಬುತ್ತಿದೆ ಸರ್ಕಾರದ ಬೊಕ್ಕಸ: ಅದು ಹೇಗೆ ಗೊತ್ತಾ, ನೀವು ನಂಬೋದೆ ಇಲ್ಲ

ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮುಜರಾಯಿ ದೇವಾಲಯಗಳಿಗೆ ಭರ್ಜರಿ ಆದಾಯ ಲಭಿಸಿದೆ, ಶಕ್ತಿ ಯೋಜನೆ ಬಳಿಕ ರಾಜ್ಯದ ತೀರ್ಥ ಕ್ಷೇತ್ರಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ. ಇದರ ಬೆನ್ನಲ್ಲೇ ರಾಜ್ಯದ ದೇವಸ್ಥಾನಗಳಲ್ಲಿ ಆದಾಯ ಕೂಡ ಏರಿಕೆಯಾಗುತ್ತಿದೆ. ಒಂದೇ ತಿಂಗಳಲ್ಲಿ 58 ದೇಗುಲಗಳಿಗೆ ಇ-ಹುಂಡಿ ಮೂಲಕ 25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11 ರವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ- ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು ಆದ್ರೆ ಈ ವರ್ಷ ಜೂನ್ 11 ಜುಲೈ 15 ರವರೆಗೆ 24.47 ಕೋಟಿ ಆದಾಯ ಲಭಿಸಿದೆ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಆದಾಯದಲ್ಲಿ ಬಾರಿ ಹೆಚ್ಚಳ ಕಂಡು ಬಂದಿರುವುದು ಗಮನಾರ್ಹ ಸಂಗತಿಯಾಗಿದೆ. ಇನ್ನೂ ದೇವಸ್ಥಾನಗಳ ಹುಂಡಿ ತೆರಯಲು ಬಾಕಿ ಇದ್ದು, ಇ – ಹುಂಡಿ ಮಾತ್ರ ತೆರೆಯಲಾಗಿದೆ. 2022ರ ಜೂನ್ 11 ರಿಂದ ಜುಲೈ 15ಕ್ಕೆ ಈ ಸಾಲಿನ ಜೂನ್ 11 ರಿಂದ ಜುಲೈ 15ರವರೆಗೆ ಹೋಲಿಕೆ ಮಾಡಿದರೆ ಆದಾಯ ಏರಿಕೆಯಾಗಿದೆ.

ಇನ್ನು ಯಾವ ಯಾವ ದೇವಸ್ಥಾನಗಳಿಗೆ ಎಷ್ಟು ಆದಾಯ ಬಂದಿದೆ.!?

ಕುಕ್ಕೆ ಸುಬ್ರಮಣ್ಯ ದೇವಾಲಯ
ಕಳೆದ ವರ್ಷ- 11.13 ಕೋಟಿ
ಈ ವರ್ಷ- 11.16 ಕೋಟಿ

ಮೈಸೂರಿನ ಚಾಮುಂಡೇಶ್ವರಿ
ಕಳೆದ ವರ್ಷ- 48.01 ಲಕ್ಷ
ಈ ವರ್ಷ- 3.63 ಕೋಟಿ

ಯಡಿಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷ-1.20 ಕೋಟಿ
ಈ ವರ್ಷ-1.48 ಕೋಟಿ

ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷ-1.05 ಕೋಟಿ
ಈ ವರ್ಷ- 1.27 ಕೋಟಿ

ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ
ಕಳೆದ ವರ್ಷ- 1.02 ಕೋಟಿ
ಈ ವರ್ಷ- 1.41 ಕೋಟಿ

ಬೆಂಗಳೂರು ಬನಶಂಕರಿ
ಕಳೆದ ವರ್ಷ- 65.82 ಲಕ್ಷ
ಈ ವರ್ಷ- 83.64 ಲಕ್ಷ

ದ.ಕನ್ನಡ ಮಹಾಲಿಂಗೇಶ್ವರ
ಕಳೆದ ವರ್ಷ – 43.33 ಲಕ್ಷ
ಈ ವರ್ಷ- 48.09 ಲಕ್ಷ

ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ
ಕಳೆದ ವರ್ಷ- 20.76 ಲಕ್ಷ
ಈ ವರ್ಷ- 27.98 ಲಕ್ಷ

ಕನಕಪುರದ ಕಬ್ಬಾಳಮ್ಮ
ಕಳೆದ ವರ್ಷ-13.96 ಲಕ್ಷ
ಈ ವರ್ಷ- 19.64 ಲಕ್ಷ

Related posts

Leave a Comment