ಕೆಂಪೆಗೌಡರ ಮುಖಕ್ಕೆ ಕಪ್ಪುಮಸಿ ಬಳಿದ ಪ್ರಕರಣ : ಅಧಿಕಾರಿಗಳಿಗೆ ತಹಸಿಲ್ದಾರ್ ನೋಟಿಸ್

ನೆಲಮಂಗಲ: ನೆಲಮಂಗಲದ ಕುಣಿಗಲ್ ಸರ್ಕಲ್‌ನಲ್ಲಿರುವ ರಾಜ್ಯ ಒಕ್ಕಲಿಗರ ವೇದಿಕೆಯ ನಾಮಫಲಕದಲ್ಲಿದ್ದ ಕೆಂಪೆಗೌಡರ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆಲಮಂಗಲದಲ್ಲಿ ಕೆಂಪೆಗೌಡ ಹೋರಾಟ ಬಳಗದವರು ಪ್ರತಿಭಟನೆ ನಡೆಸಿದ್ದು ತಪ್ಪಿತಸ್ಥರನ್ನ ಬಂಧಿಸುವಂತೆ ಆಗ್ರಹಿಸಿ ತಹಸಿಲ್ದಾರ್ ಕಚೇರಿಗೆ ಮನವಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕಿಡಿಗೇಡಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಅತೀ ಶೀಘ್ರದಲ್ಲೆ ತಹಸಿಲ್ದಾರ್ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ: ನೆಲಮಂಗಲ ನಗರದ ರಾಷ್ಟ್ರೀಯ ಹೆದ್ದಾರಿ 48 ರ ಸರ್ವಿಸ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 75 ರ ಕಡೆ ಹೋಗುವ ಕುಣಿಗಲ್ ಬೈಪಾಸ್‌ನ ನಾಡಪ್ರಭು ಕೆಂಪೇಗೌಡರ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಐಕ್ಯಸ್ಥಳಕ್ಕೆ ಹೋಗುವ ದಾರಿಯನ್ನು ತೋರಿಸುವ ನಾಮಫಲಕವನ್ನು ರಾಜ್ಯ ಒಕ್ಕಲಿಗರ ಜಾಗೃತಿ ವೇದಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ಹಾಕಿರುವ ನಾಮಫಲಕದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಯಾರೋ ಕಿಡಿಗೇಡಿಗಳು ಇತ್ತೀಚೆಗೆ ಕಪ್ಪು ಮಸಿಯನ್ನು ಬಳಿದಿರುತ್ತಾರೆ, ಆದ್ದರಿಂದ ಕೂಡಲೇ ಸದರಿ ಕೃತ್ಯವನ್ನು ಮಾಡಿದ ನಾಡದ್ರೋಹಿ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕಿಡಿಗೇಡಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಅತೀ ಶೀಘ್ರವಾ ಈ ಕಛೇರಿಗೆ ಸಲ್ಲಿಸಲು ಕೋರಿದೆ.

ಇದನ್ನೂ ಓದಿ: ನೆಲಮಂಗಲದಲ್ಲಿ ಕೆಂಪೆಗೌಡರ ಭಾವಚಿತ್ರಕ್ಕೆ ಕಪ್ಪು ಬಣ್ಣ, ಬುಗಿಲೆದ್ದ ಜನಾಕ್ರೋಶ

ಪ್ರಕರಣ: ನೆಲಮಂಗಲದ ಕುಣಿಗಲ್ ಸರ್ಕಲ್‌ನಲ್ಲಿರುವ ರಾಜ್ಯ ಒಕ್ಕಲಿಗರ ವೇದಿಕೆಯ ನಾಮಫಲಕದಲ್ಲಿದ್ದ ಕೆಂಪೆಗೌಡರ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆಲಮಂಗಲದಲ್ಲಿ ಕೆಂಪೆಗೌಡ ಹೋರಾಟ ಬಳಗದವರು ಪ್ರತಿಭಟನೆ ನಡೆಸಿದ್ದಾರೆ. 

ಹೆದ್ದಾರಿ ತಡೆ: ಕುಣಿಗಲ್ ಬೈಪಾಸ್‌ ಸರ್ಕಲ್‌ನಲ್ಲಿ ಪ್ರತಿಭಟನ ನಿರತ ನಾಗರೀಕರು ಹೆದ್ದಾರಿ ತಡೆದು ಮಾನವ ಸರಪಳಿ ರಚಿಸಿದರು. ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಪ್ರತಿಭಟನಾ ನಿರತರು ಕಪ್ಪು ಬಣ್ಣ ಬಳಿದವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾದು ನಿಂತಿದ್ದರು.

Related posts

One Thought to “ಕೆಂಪೆಗೌಡರ ಮುಖಕ್ಕೆ ಕಪ್ಪುಮಸಿ ಬಳಿದ ಪ್ರಕರಣ : ಅಧಿಕಾರಿಗಳಿಗೆ ತಹಸಿಲ್ದಾರ್ ನೋಟಿಸ್”

Leave a Comment