ಟೆಕ್ಕಿ ಗಾಜು ಪುಡಿ ಪುಡಿ ಮಾಡಿದ ಪುಂಡರು: ಕಾರಣ ಇಷ್ಟು ಸಿಲ್ಲಿನಾ?

ಆ ಪುಂಡರು ಕಂಡ ಕಂಡವರನ್ನ ರೇಗಿಸೋದೆ ಕೆಲಸ ಮಾಡ್ಕೊಂಡಿದ್ರು, ಟೆಕ್ಕಿಯೊಬ್ಬರನ್ನ ಮಾತನಾಡಿಸೋಕೆ ಹೋಗಿ ನಂಬರ್ ಕೇಳಿದ್ದಾರೆ, ನಂಬರ್ ಕೊಡಲ್ಲ ಎಂದಿದ್ದಕ್ಕೆ ಮನೆ ಬಳಿ ತೆರಳ್ಳಿ ಅವರ ಕಾರಿನ ಗ್ಲಾಸ್ ಪೀಸ್ ಪೀಸ್ ಮಾಡಿದ್ದಾರೆ.

ಆ ಏರಿಯಾದಲ್ಲಿ ಒಮ್ಮೆ ನಡೆದುಕೊಂಡು ಬರುವ ಇಬ್ಬರು ವ್ಯಕ್ತಿಗಳು ಕಲ್ಲು ತೆಗೆದುಕೊಂಡು ಕಾರಿನ ಗಾಜಿನ ಹಿಂಬದಿಗೆ ತೂರಿ ಒಡೆಯುತ್ತಾರೆ ಇದಾದ ಐದೇ ನಿಮಿಷಗಳಲ್ಲಿ ಮತ್ತಿಬ್ಬರು ಬಂದು ಬೈಕ್‌ನಲ್ಲಿ ತಂದ ಇಂದು ಕಲ್ಲ‌ನ್ನ ಕಾರಿನ‌ ಗಾಜಿನ ಮೇಲೆ ಎಸೆಸು ಪರಾರಿಯಾಗ್ತಾರೆ,  ಇದ್ಯಾವ್ದೋ ಹಳೇ ದ್ವೇಷ ರೋಷ ಆವೇಷ ಆಕ್ರೋಶ ಅನ್ಸುತ್ತೆ, ಈ ರೀತಿ ಪುಂಡರು ಗಾಜು ಹೊಡೆದಿರುವುದು ಒಂದು ಸಿಲ್ಲಿ ರೀಸನ್‌ಗೆ. ಘಟನೆ ನಡೆದಿರುವುದು ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯ ಬೃಂದಾವನ ಬಡಾವಣೆಯಲ್ಲಿ, ಒಂದು ಮೊಬೈಕ್ ನಂಬರ್ ವಿಚಾರಕ್ಕೆ ಈಗೆ ಗಾಜು ಹೊಡೆದು ಪುಡಿ ಪುಡಿ ಮಾಡಿದ್ದಾರೆ.

ಮಹಿಳಾ ಟೆಕ್ಕಿಯೊಬ್ಬರು ಕೆಲಸ ಮುಗಿಸಿಕೊಂಡು ಮನಗೆ ಹೋಗುತ್ತಿದ್ದಾಗೆ ಆಕೆಯನ್ನ ಹಿಂಬಾಲಿಸಿದ ನಾಲ್ಕು ಜನ ಆರೋಪಿಗಳು ಆಕೆಯ ಮೊಬೈಲ್‌ನಂಬರ್ ಕೇಳಿದ್ದಾರೆ. ನನ್ನ ಮೊಬೈಲ್‌ ನಂಬರ್ ನಿಮಗೇಕೆ ಕೊಡಬೇಕು ಎಂದಾಗ ಸುಮ್ಮನೆ ಟೈಂ ಪಾಸ್‌ಗೆ ಕೊಡಿ ಎಂದಿದ್ದಾರೆ. ಈ ವೇಳೆ ಟೆಕ್ಕಿ ಪ್ರತಿಕ್ರಿಯಿಸದೆ ಅಲ್ಲಿಂದ ಮನೆಗೆ ತೆರಳಿದ್ದಾರೆ. ಇದಾದ ಕೆಲವೇ ಹೊತ್ತಲ್ಲಿ ಆಕೆಯ ಮನೆ ಬಳಿಗೆ ಬಂದಿದ್ದ ಆರೋಪಿಗಳು ಕೃತ್ಯವೆಸಗಿ ಪರಾರಿಯಾಗಿದ್ದು ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳಲ್ಲಿ ಓರ್ವನನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೀಣ್ಯ ಪೊಲೀಸರು ಬಲೆ ಬೀಸಿದ್ದಾರೆ.

Related posts

Leave a Comment