ಗಂಡ ಬಿಟ್ಟವಳಿಗೆ ಬಾಳು ಕೊಡಲು ಬಂದ ಅತ್ತೆ ಮಗ: ಆಕೆಯನ್ನ ಗರ್ಭಿಣಿ ಮಾಡಿ ಪರಾರಿ

ಬೆಂಗಳೂರು: ಗಂಡ ಬಿಟ್ಟವಳಿಗೆ ಬಾಳು ಕೊಡುವೆ ಎಂದು ತನ್ನ ಸ್ವಂತ ಅತ್ತೆ ಮಗನೇ 6 ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಷನ್‌ಷಿಪ್ (leaving together Relationship) ಇಟ್ಟುಕೊಂಡು, ಮಹಿಳೆ ಮೂರು ತಿಂಗಳ ಗರ್ಭಿಣಿ ಮಾಡಿ, ಮನೆಯವರಿಗೆ ಮದುವೆಗೆ ಒಪ್ಪಿಸುತ್ತೇನೆ ಎಂದು ಹೋಗಿದ್ದವನು ಪರಾರಿಯಾಗಿದ್ದಾನೆ, ನ್ಯಾಯ ಕೊಡಿ ಎಂದು ಪ್ರಿಯಕರ ಮನೆ ಬಳಿ ಹೋದರೆ ಆತನ ಪೋಷಕರಿಂದ ನಿಂದನೆಗೊಳಗಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya police) ಪ್ರಕರಣ ದಾಖಲು ಮಾಡಿದ್ದಾಳೆ ಸಂತ್ರಸ್ತ ಮಹಿಳೆ. ಇದನ್ನೂ ಓದಿ: ಒಂದೇ ದಿನ ಹೃದಯಘಾತದಿಂದ ಇಬ್ಬರು ಪೊಲೀಸರು ಸಾವು: ದಿನೇ ದಿನೇ ಹೆಚ್ಚಳವಾಗುತ್ತಿದೆ ಸಾವಿನ ಸಂಖ್ಯೆ ಮಹಿಳೆ ಕೊಟ್ಟ ದೂರಿನಲ್ಲಿ ಕಣ್ಣಿರ ಕಥೆ: ಕಳೆದ 10 ವರ್ಷಗಳಿಂದ ಪತಿಯಿಂದ ದೂರ ಇದ್ದು ತಮ್ಮ ತಂದೆಯವರ ತಂಗಿ ಲಕ್ಕಮ್ಮ ಎಂಬುವವರ ಮಗನಾದ ಕರಣ್ ಕುಮಾರ್‌, ಚಿಕ್ಕಂದಿನಿಂದಲೂ ಪರಿಚಯವಿದ್ದು, 6 ವರ್ಷದ ಹಿಂದೆ ನಿನಗೆ ಬಾಳು ಕೊಡುತ್ತೇನೆ,…

Read More