ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ಬಸವರಾಜು ನಿಧನ

ಡಾಬಸ್‌ಪೇಟೆ : ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೋಂಪುರ ಹೋಬಳಿಯ ಬಾಪೂಜಿನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರಾಗಿದ್ದ ಬಸವರಾಜು ಟಿ.ಎಲ್. (45) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಬಸವರಾಜು ಟಿ.ಎಲ್ ಇವರು ಸೋಂಪುರ ಹೋಬಳಿಯ ತಟ್ಟೆಕೆರೆ ಗ್ರಾಮದವರಾಗಿದ್ದು, ದಾಬಸ್‌ಪೇಟೆ ಪಟ್ಟಣದ ಹೊನ್ನಮ್ಮ ಲೇಔಟ್‌ನಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಇವರು ಮೇ.12 ರಂದು ಸುಮಾರು ಸಂಜೆ 5 ಗಂಟೆಯ ಸಮಯದಲ್ಲಿ ಬಸವಾಪಟ್ಟಣ ಕಡೆಯಿಂದ ದಾಬಸ್‌ಪೇಟೆ ಕಡೆಗೆ ತಮ್ಮ ಬೈಕ್‌ನಲ್ಲಿ ಬರುವಾಗ ಕಂಬಾಳು ಮಠದ ಸಮೀಪ ಅಪಘಾತವಾಗಿತ್ತು. ಅವರನ್ನು ಸ್ಥಳೀಯರು ಬೆಂಗಳೂರಿನ ಗೊರಗುಂಟೆಪಾಳ್ಯದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಮೇ.೩೦ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ಶಿಕ್ಷಕ ಬಸವರಾಜು ಸರ್ಕಾರಿ ವಿದ್ಯಾ ಇಲಾಖೆ ನೌಕರರ ಸಂಘದ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಕಾರ್ಯದರ್ಶಿಯಾಗಿ, ಸೇವೆ ಸಲ್ಲಿಸಿದ್ದಾರೆ.ಮೃತರ ಆತ್ಮಕ್ಕೆ ಶಾಸಕ ಎನ್.ಶ್ರೀನಿವಾಸ್, ಬಿಇಒ ತಿಮ್ಮಯ್ಯ, ಶಿಕ್ಷಣ ಇಲಾಖೆಯ ಸಂಯೋಜಕಿ…

Read More