ಧರ್ಮಸ್ಥಳದಲ್ಲಿ ಸೌಜನ್ಯಳ ಅತ್ಯಾಚಾರ ಪ್ರಕರಣ: ಸಿಬಿಐ ಕೋರ್ಟ್‌ನ ವರದಿಯಲ್ಲೇನಿದೆ.

ಧರ್ಮಸ್ಥಳದಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ಪಿಯು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶ ಈ ಕೆಳಗಿನಂತಿದೆ. ಅತ್ಯಚಾರ ಪ್ರಕರಣ ಬೆಳಕಿಗೆ ಬಂದ ನಂತರದ 48 ಗಂಟೆಯನ್ನು ಸಾಕ್ಷ್ಯ ಸಂಗ್ರಹದ ದೃಷ್ಟಿಯಲ್ಲಿ ಅಮೂಲ್ಯವಾದ ಸಮಯ. ಅದನ್ನು ಗೋಲ್ಡನ್‌ ಅವರ್‌ ಎಂದು ಕರೆಯಲಾಗುತ್ತದೆ. ಆದರೆ ಸೌಜನ್ಯ ಅತ್ಯಾಚಾರ ಕೊಲೆ ನಡೆದು ಎರಡು ದಿನಗಳಲ್ಲಿ ಅಪರಾಧಿಗಳ ಪತ್ತೆಗೆ ಪೂರಕವಾಗುವ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಲಾಗಿದೆ ಎಂಬ ಅನುಮಾನವನ್ನು ಸಿಬಿಐ ಕೋರ್ಟ್‌ ವ್ಯಕ್ತಪಡಿಸಿದೆ. ಸಿಬಿಐ ಕೋರ್ಟಿನ ಆದೇಶದ ಪ್ರತಿ ಲಭ್ಯವಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿಯ ಯೋನಿಯಿಂದ ಸಂಗ್ರಹಿಸಿದ ಸ್ವ್ಯಾಬ್‌ ಅನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿಲ್ಲ. ಸ್ವ್ಯಾಬ್‌ ಅನ್ನು ಒಣಗಿಸಿ ಸಂರಕ್ಷಿಸಬೇಕು. ಆದರೆ, ʼಸೌಜನ್ಯಳ ಯೋನಿ ಸ್ವ್ಯಾಬ್‌ ಪರೀಕ್ಷೆಗೆಂದು ಲ್ಯಾಬ್‌ಗೆ ತಲುಪುವಾಗ ಫಂಗಸ್‌ ಹಿಡಿದಿತ್ತುʼ ಎಂದು ಎಫ್‌ಎಸ್‌ಎಲ್‌ ಅಧಿಕಾರಿಗಳು ವರದಿ ಕೊಟಿರುವುದನ್ನು…

Read More