ಬಕ್ರಿದ್ ಹಬ್ಬದ ವೇಳೆ ಇಂಗೆ ಮಾಡುದ್ರೆ ಬದುಕೋದು ಹೇಗೆ

ನೆಲಮಂಗಲ: ಬಕ್ರೀದ್ ಸಮೀಪಿಸುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ   ಕುರಿ-ಮೇಕೆ ಕಳ್ಳತನ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ. ಜೂ.22 ರಂದು ತಡರಾತ್ರಿ ನಗರದ ಭಕ್ತನಪಾಳ್ಯ ಗ್ರಾಮದ ನಿವಾಸಿ ರಾಮಣ್ಣ ಎಂಬಾತರಿಗೆ ಸೇರಿದ್ದ ಸುಮಾರು 30 ಸಾವಿರ ಮೌಲ್ಯದ ನಾಲ್ಕು ಮೇಕೆಗಳನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ. ಜೂ. 23 ರ ಶುಕ್ರವಾರ ಬೆಳಗ್ಗೆ 5 ಗಂಟೆ ವೇಳೆಯಲ್ಲಿ ರಾಮಣ್ಣ ಬಂದು ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ರಾಮಣ್ಣ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ದುಷ್ಕರ್ಮಿಗಳು ಮೇಕೆ ಕಳವು ಮಾಡಿದ್ದ ದೃಶ್ಯ ಸಮೀಪ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುದೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಿದೆಡೆ ಕಳವು: ತಾಲೂಕಿನಾದ್ಯಂತ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿದೆಡೆ ಕಳೆದ 15 ದಿನದಿಂದ ಸುಮಾರು ನೂರಕ್ಕೂ ಹೆಚ್ಚು ಕುರಿ ಮೇಕೆ ಕಳ್ಳತನ ವಾಗಿದ್ದು ಬೆಳಕಿಗೆ ಬಂದಿದೆ. ರೈತ ರಾಮಣ್ಣ ಮಾತನಾಡಿ ಬಕ್ರೀದ್ ಹಬ್ಬಕ್ಕೆ…

Read More