ನೆಲದಲ್ಲಿ ಅವಿತಿದ್ದ 25 ನಾಗರ ಹಾವಿನ‌ ಮರಿ ಪತ್ತೆ

ಧಾರವಾಡ: ಭೂಮಿ ಒಳಗೆ ಅವಿತಿದ್ದ 25 ನಾಗರ ಹಾವಿನ ಮರಿಗಳನ್ನ ಹೊರ ತೆಗೆದಿದ್ದು, ಹಾವಿನ ಮರಿಗಳನ್ನ ಕಂಡ ಜನ ಹೌಹಾರಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ನಾಗರ ಹಾವಿನ ಮರಿಗಳು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ತಾಯಿ ನಾಗರ ಹಾವಿನ ಹಿಂದೆಯೇ ನೆಲದಿಂದ 25ಕ್ಕೂ ಹೆಚ್ಚು ‌ಮರಿ ನಾಗರ ಹಾವುಗಳು ಹೊರಬಂದಿದ್ದು, ಈ ಎಲ್ಲ ದೃಶ್ಯ ಗ್ರಾಮಸ್ಥರು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರು ‌ಮನೆಯ ಹಿತ್ತಲಲ್ಲಿ ನಾಗರ ಹಾವಿನ‌ ಮರಿಗಳು ಕಂಡು ಬಂದಿವೆ. ಕಳೆದ ಹಲವು ದಿನಗಳಿಂದ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರ ಹಾವು ಓಡಾಡುತ್ತಿತ್ತು, ಇದನ್ನ ಕಂಡ ಬಸವರಾಜ ಕಟ್ಟಮನಿ ಅವರು ಉರಗ ತಜ್ಞನಿಗೆ ಕರೆಸಿ ಹಾವು ಹಿಡಿಸಿದ್ದಾರೆ. ಸಂರಕ್ಷಿಸಿದ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

Read More