ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು: ಜನರಲ್ಲಿ ಇದೆ ವಿಶಿಷ್ಟ ನಂಬಿಕೆ

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದಲ್ಲಿ ವಿಶಿಷ್ಟ ಆಚರಣೆ ನಡೆದಿದೆ, ಮಳೆ ಆರಂಭಕ್ಕೆ ತಡವಾದ ಬೆನ್ನೆಲ್ಲೇ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿದ್ದಾರೆ. ಪೂರ್ವಜರ ನಂಬಿಕೆಯಲ್ಲಿ ವಿಶ್ವಾಸವಿಟ್ಟ ಗ್ರಾಮಸ್ಥರಿಂದ ಕಪ್ಪೆಗಳಿಗೆ ಮದುವೆ ಮಾಡಲಾಗಿದ್ದು, ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಉಡಿ ತುಂಬಿದ ಮುತ್ತೈದೆಯರುಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೆರೆದು, ಹಾಸಕ್ಕಿ ಹಾಕಿ, ಕಪ್ಪೆಗಳಿಗೆ ತಾಳಿ ಕಟ್ಟಿಸಿದ್ದಾರೆ ಗ್ರಾಮಸ್ಥರು. ಭಕ್ತರಿಗೆ ಅನ್ನ ಪ್ರಸಾದವನ್ನ ಏರ್ಪಡಿಸಿ ‘ಮಳೆರಾಯ ಬೇಗ ಬಾ’ ಅಂತಾ ವಿಶೇಷ ನಮನ ಸಲ್ಲಿಸಿ ಅರಿಶಿಣಶಾಸ್ತ್ರ, ಹಂದರ ಶಾಸ್ತ್ರ ನೆರವೇರಿಸಿದ್ದಾರೆ. ವಿವಿಧ ವಾದ್ಯ ಮೇಳಗಳೊಂದಿಗೆ ಕಪ್ಪೆಗಳನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

Read More