ಪೊಲೀಸರ ಹೆಸರಿನಲ್ಲಿ 20, 50 ರುಪಾಯಿ ವಸೂಲಿ: ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ದೂರು – Digital Varthe

ನೆಲಮಂಗಲ: ನಗರದ ಶ್ರೀ ಗೋಪಿವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಪೊಲೀಸ್ ಉಪವಿಭಾಗವ್ಯಾಪ್ತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಸಮ ಸ್ಯೆಗಳ ಸುರಿಮಳೆ ಹರಿಯಿತು. ಗುರುವಾರದಂದು ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ಬಾಲದಂಡಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಗೆ ಆಗಮಿಸಿದ್ದ ಉಪವಿಭಾಗವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಹಲವು ರೀತಿಯ ಸಮಸ್ಯೆಗಳನ್ನು ತೋಡಿಕೊಂಡರು. ಪ್ರತಿಧ್ವನಿಸಿದ ಸಮಸ್ಯೆಗಳು: ಹೆದ್ದಾರಿಗಳಲ್ಲಿನ ಇಕ್ಕೆಲಗಳಲ್ಲಿ ನಿಲುಗಡೆಯ ಬಾರಿ ವಾಹನಗಳಿಂದಾಗಿ ನಗರದ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳಿಂದಾಗಿ ಉದ್ಭವಿಸುತ್ತಿರುವ ವಾಹನದಟ್ಟಣೆಯ ಕಿರಿಕಿರಿ, ಶಾಲಾಕಾಲೇಜುಗಳ ರಸ್ತೆಯಲ್ಲಿನ ಪುಂಡರಹಾವಳಿ, ಮಾಧಕ ವಸ್ತುಗಳ ಮಾರಾಟ, ಯವಜನತೆಯ ಸೇವನೆ ಸೇರಿದಂತೆ ಗ್ರಾಮೀಣಭಾಗದ ಹಳ್ಳಿಗಳಲ್ಲಿ ಅಕ್ರಮ ಮದ್ಯಮಾರಾಟ ಸಮಸ್ಯೆಗಳು ಪ್ರತಿಧ್ವನಿಸಿದವು. ಹೆಚ್ಚುತ್ತಿರುವ ಸರಅಪಹರಣ, ವಾಹನ, ಮನೆಕಳವು, ಹೆದ್ದಾರಿ ದರೋಡೆ ಪ್ರಕರಣಗಳ ಜತೆಗೆ ಯುವಕರ ವ್ಹೀಲಿಂಗ್ ಪ್ರಕರಣಗಳ ಕುರಿತು ಹಲವರು ಪ್ರಸ್ಥಾಪಿಸಿದರು.…

Read More