ಬಿಗ್ ಬಾಸ್ ಖ್ಯಾತೀಯ ಪ್ರಶಾಂತ್ ಸಂಭರ್ಗಿ ವಿರುದ್ದ ಎಫ್‌ಐ‌ಆರ್: ಬಂಧನದ ಭೀತಿಯಲ್ಲಿ ಪ್ರಶಾಂತ್

ಬೆಂಗಳೂರು: ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತೀಯ ಪ್ರಶಾಂತ್ ಸಂಭರ್ಗಿ ವಿರುದ್ದ ಬೆಂಗಳೂರಿನ ಹಲಸೂರ್ ಗೇಟ್ ಠಾಣೆಯಲ್ಲಿ ಸೆಕ್ಷನ್ 420ಅಡಿ ಪ್ರಕರಣ ದಾಖಲಾಗಿದೆ. ಉದ್ಯಮಿ ದೇವನಾತ್ ವೈಕ್ಯೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ: 2017ರ ಜುಲೈನಲ್ಲಿ ಸಂಬರ್ಗಿಯಿಂದ  ದೇವನಾತ್ ಸಾಲ ಪಡೆದುಕೊಂಡಿದ್ದರು ಈ ವೇಳೆ ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶ್ಯೂರಿಟಿ ನೀಡಿದ್ದರು. ಬಳಿಕ 2017ಡಿಸೆಂಬರ್ ನಲ್ಲಿ ಅಷ್ಟೂ ಹಣ ವಾಪಸ್ ನೀಡಿದ್ದರು ಆದ್ರೆ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಮನೆ ದಾಖಲೆ‌ ನೀಡದೆ ಸತಾಯಿಸಿದ್ದ ಸಂಬರ್ಗಿ. ವಿವಿಧ ಪೊಲೀಸ್ ಠಾಣೆಯಲ್ಲಿ  ದೇವನಾತ್ ವಿರುದ್ಧ ಸುಳ್ಳು ದೂರು ನೀಡಿದ್ದರು, ಸದ್ಯ ಸುಳ್ಳು ದೂರು ಹಿನ್ನೆಲೆ ಸಂಬರ್ಗಿ ವಿರುದ್ಧ ಹಲಸೂರ್ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More