ಪುರಸಭೆ ಮಾಜಿ ಅಧ್ಯಕ್ಷ ಹಗೂ ಟಿಎಪಿಸಿಎಂಎಸ್ ನಿರ್ದೇಶಕ ಎ.ಪಿಳ್ಳಪ್ಪರವರ ೫೭ ನೇ ಹುಟ್ಟುಹಬ್ಬದ ಸಂಭ್ರಮ

ನೆಲಮಂಗಲ: ನಗರ ಪರಮಣ್ಣ ಬಡಾವಣೆಯ ಗೃಹಕಚೇರಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಗೂ ಟಿಎಪಿಸಿಎಂಎಸ್ ನಿರ್ದೇಶಕ ಎ.ಪಿಳ್ಳಪ್ಪ ತಮ್ಮ ೫೭ ನೇ ಹುಟ್ಟುಹಬ್ಬವನ್ನು ಕುಟುಂಬದವರು ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಬಡಾವಣೆಯ ಶ್ರೀ ವೀರಾಂಜನೇಯ ಸ್ವಾಮಿ ಹಾಗೂ ನಗರದ ಬಸವನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಪುರಸಭೆ ಮಾಜಿ ಅಧ್ಯಕ್ಷ ಹಗೂ ಟಿಎಪಿಸಿಎಂಎಸ್ ನಿರ್ದೇಶಕ ಎ.ಪಿಳ್ಳಪ್ಪ ಮತ್ತವರ ಕುಟುಂಬದವರು ನಂತರ ಅಭಿಮಾನಿಗಳು ಆಯೋಜಿಸಿದ್ದ ಹುಟ್ಟು ಹಬ್ಬ ಆಚರಿಸಿಕೊಂಡರು. ಸAದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ವಿಧಾನ ಪರಿಷತ್ತು ಮಾಜಿ ಸದಸ್ಯ ಬಿಎಂಎಲ್.ಕಾಂತರಾಜು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್, ಸದಸ್ಯ ಗಂಗಾಧರ್‌ರಾವ್, ಪುರುಷೋತ್ತಮ್, ರಾಜಮ್ಮಪಿಳ್ಳಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ನಾಗರಾಜು, ಟಿಎಪಿಸಿಎಂಟಿ ನಿರ್ದೇಶಕ ನರಸಿಂಹಮೂರ್ತಿ, ವಕೀಲ ಗಂಗರಾಜು, ದ್ವಿಚಕ್ರವಾಹನ ದುರಸ್ಥಿಗಾರರ ಸಂಘದ ಪದಾಧಿಕಾರಿ ಮೌಲ, ನೂರ್,…

Read More