PARKING PROBLEM ಖಾಸಗಿ ವಾಹನಗಳಿಕೆ ನಿಲ್ದಾಣವಾಗಿದೆ ಸರ್ಕಾರಿ ಆಸ್ಪತ್ರೆ ಆವರಣ: ಆಸ್ಪತ್ರೆಗೆ ಬರುವ ಆಂಬುಲೆನ್ಸ್‌, ರೋಗಿಗಳ ಪರದಾಟ

ನೆಲಮಂಗಲ (ಜೂ 05): ಸರ್ಕಾರಿ ಆಸ್ಪತ್ರೆ ಆವರಣ ಖಾಸಗಿ ವಾಹನಗಳಿಗೆ ನಿಲ್ದಾಣವಾಗಿದ್ದು ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ ದಾರಿ ಇಲ್ಲದೆ ಪರದಾಡುವಂತಾಗಿದೆ. ಆಂಬುಲೆನ್ಸ್‌ ಪರದಾಟ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿರುವ ನೆಲಮಂಗಲ ತಾಲೂಕೂ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಮಸ್ಯೆ ಎದುರಾಗಿದ್ದು, ನಿತ್ಯ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಒಂದೆಡೆ ಆಂಬುಲೆನಸ್ಸ ಸವಾರರು ಪರದಾಡುತ್ತಿದ್ದರೆ ಮತ್ತೊಂದೆಡೆ ತಮ್ಮ ಸ್ವಂತ ವಾಹನಗಳಲ್ಲಿ ಆಸ್ಪತ್ರಗೆ ಬರುವ ರೋಗಿಗಳಿಗೆ ವಾಹನ ನಿಲ್ಲಿಸಲು ಸಮಸ್ಯೆ ಎದುರಾಗಿದೆ. ಸರ್ಕಾರಿ ಕಚೇರಿಗೆ ಬರುವವರೆ ಹೆಚ್ಚು: ತಾಲೂಕು ಸಾರ್ವಜನಿಕ ಆಸ್ಪತ್ರೆ ಸಮೀಪದಲ್ಲಿ ಹಲವಾರು ಸರ್ಕಾರಿ ಆಸ್ಪತ್ರೆಗಳಿದ್ದು ನಿತ್ಯ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನ ಆಸ್ಪತ್ರೆ ಆವರಣದಲ್ಲಿ ಬಿಟ್ಟು ತೆರಳುತ್ತಾರೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ವಾಹನ ದಟ್ಟಣೆ ಹೆಚ್ಚಳವಾಗುತ್ತದೆ. ಇಲಾಖ ಸಿಬ್ಬಂಧಿಗಳ ವಾಹನ: ತಾಲೂಕು ದಂಡಾಧಿಕಾರಿಗಳ ಕಚೇರಿ, ನೆಲಮಂಗಲ ಟೌನ್‌ ಪೊಲೀಸ್‌ ಠಾಣೆ,…

Read More