ಅನುಭವಿ ಸಚಿವರಾದ ಡಾ.ಜಿ.ಪರಮೇಶ್ವರ್‌ಗೆ ಮತ್ತೊಮ್ಮೆ ಒಲಿದ ಸಚಿವಸ್ಥಾನ

-ಅನೀಲ್ ಕುಮಾರ್ ಚಿಕ್ಕದಾಲವಟ್ಟ ತುಮಕೂರು ಜಿಲ್ಲೆ ತಮ್ಮ ಕಾರ್ಯಕ್ಷೇತ್ರವಾದರೂ, ರಾಜ್ಯದ ರಾಜಕಾರಣದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿ ಬೆಳೆದು ಗುರುತಿಸಿಕೊಂಡವರು ಡಾ. ಜಿ ಪರಮೇಶ್ವರ್. ದೀರ್ಘಕಾಲದವರೆಗೆ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು, ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಶಾಸಕ, ಸಚಿವ, ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಅಲಂಕರಿಸಿ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಡಾ. ಜಿ. ಪರಮೇಶ್ವರ್ ಮೂಲತಃ ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯ ಗ್ರಾಮದವರು. ತಂದೆ ಹೆಚ್.ಎಂ. ಗಂಗಾಧರಯ್ಯನವರು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಭೀಷ್ಮ ಎಂದೇ ಹೆಸರಾಗಿದ್ದರು. ದಲಿತ ಕುಟುಂಬದಲ್ಲಿ ಹುಟ್ಟಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಿದ್ಧಾರ್ಥ ಹೆಸರಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಟ್ಟಿಬೆಳೆಸಿದರು. ಹೆಚ್.ಎಂ. ಗಂಗಾಧರಯ್ಯನವರ ನಂತರ ಅವರ ಹಿರಿಯ ಪುತ್ರ ಡಾ. ಜಿ ಶಿವಪ್ರಸಾದ್ ಹಾಗೂ ಪರಮೇಶ್ವರ್‌ರವರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಹೊತ್ತುಕೊಂಡರು. ಅಣ್ಣ ನಿಧನರಾದ ನಂತರ ಈಗ…

Read More