ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು

ನೆಲಮಂಗಲ: ತಾನೂ ಕೆಲಸ ಮಾಡುತ್ತಿದ್ದ ಮಾಲಿಕನ ಪತ್ನಿಯ ಫೋಟೋ ತೆಗೆದುಕೊಂಡು ಗಂಡನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನ ಅರೊಪಿ ಕಳೆದ ನಾಲ್ಕು ತಿಂಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಾಕ್ಕೆ ಯತ್ನಿಸಿದ್ದ, ಮರ್ಯಾದೆ ಅಂಜಿ ದೂರು ನೀಡದೆ  ಆತನನ್ನ ಕೆಲಸದಿಂದ ತೆಗೆದಿದ್ದರು. ಇದಾದ ಬಳಿಕ ಆರೋಪಿ ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಸೆರೆಹಿಡಿದಿದ್ದ ಮಹಿಳೆಯ ಫೋಟೋಗಳನ್ನ ಆತನ ಗಂಡನಿಗೆ ಫೋಟೋಗಳನ್ನ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಆರೋಪಿ ಕಿರುಕುಳಕ್ಕೆ ಬೇಸತ್ತು ಗಂಡ ಹೆಂಡತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಜೀವನಾಂಶ ಕೋರುವ ವಿಚ್ಚೇದಿತ ಪತ್ನಿಗೆ ಶಾಕ್ ನೀಡ ನ್ಯಾಯಾಲಯ

ಬೆಂಗಳೂರು: ಹಿಂದೂ ಸೇರಿದಂತೆ ವಿವಿಧ ಧರ್ಮಗಳ ಧಾಮ್ರಿಕ ಕಾನೂನಿನಂತೆ ಹಾಗೂ ಸಾಂವಿಧಾನಿಕ ಕಾನೂನಿನಡಿ ವಿವಾಹ ಆಗಿರುವ ಸಂಪತಿಗಳು ಯಾವುದೋ ಒಂದು ಸೂಕ್ತ ಕಾರಣಗಳಿಗೆ ಸಾಂಸರಿಕ ಜೀವನದಲ್ಲಿ ಬಿರುಕು ಉಂಟಾಗಿರುತ್ತದೆ. ಈ ಹಿಂದೆ ಸಾಂಸಾರಿಕ ಜೀವನದ ಬಿರುಕು ಬಂದರೆ ಹಿರಿಯ ಸಮ್ಮುಖದಲ್ಲಿ ಪಂಚಾಯ್ತಿ ಕಟ್ಟೆಗಳಲ್ಲಿ ನ್ಯಾಯ ತೀರ್ಮಾನ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡುತ್ತಿದ್ದರು, ಆದ್ರೆ ಭಾರತದಲ್ಲಿ ಗಣತಂತ್ರ ವ್ಯವಸ್ಥೆ ಜಾರಿಯಾದ ಬಳಿಕ ಎಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿ ಒಳಪಡುತ್ತದೆ. ವಿವಾಹ ವಿಚ್ಚೇದನವೂ ಕಾನೂನಿನ ಅಡಿಯಲ್ಲಿ ಒಳಪಡುವುದರಿಂದ ಒಮ್ಮೆ ಮದುವೆಯಾದ ದಂಪತಿಗಳು ವಿಚ್ಚೇದನ ತೆಗೆದುಕೊಳ್ಳಬೇಕೆಂದರೇ ಕಾನೂನಿನ ಚೌಕಟ್ಟಿನಲ್ಲಿ ಪಡೆದ ವಿಚ್ಚೇದನ ಅಧಿಕೃತ ಆಗಿರುತ್ತದೆ. ಬಿಜೆಪಿಗೆ ಯಗ್ಗಾಮುಗ್ಗಾ ತರಾಟೆಗೆ ತೆಗೆದುದುಕೊಂಡ ಶಾಸಕ ಶಿವಲಿಂಗೆಗೌಡ, ಬಿಜೆಪಿ ಪರ ಕುಮಾರಸ್ವಾಮಿ ಬ್ಯಾಟ್‌, ಶಿವಲಿಂಗೆಗೌರಿಗೆ ಟಾಂಗ್‌, ಇಬ್ಬರ ಜಟಾಪಟಿ ಕಾನೂನಿ ಚೌಕಟ್ಟಿನಲ್ಲಿ ವಿಚ್ಚೇದನ ಪಡೆದಾಗ ಗಂಡ ತನ್ನ ವಿಚ್ಚೇದಿತ ಹೆಂಡತಿಗೆ ಜೀವನಾಂಶ ಒದಗಿಸಬೇಕೆಂದಿ ಕಾನೂನು ರೂಪಿಸಲಾಗಿತ್ತು.…

Read More

ಅಂತರಾಜ್ಯ ಕಳ್ಳರನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು, ಬಂಧಿತರಿಂದ 75 ಲಕ್ಷ ಮೂಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ವಶಕ್ಕೆ – Digital Varthe

ನೆಲಮಂಗಲ: ಕೊಟ್ಯಾಂತರ ರುಪಾಯಿ ಮೌಲ್ಯದ ಕ್ಯಾಮೆರಾ, ಲ್ಯಾಪ್‌ ಟಾಪ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ‌ ಕಳ್ಳತನ್‌ ಮಾಡಿದ್ದ ಏಳು ಜನ ಆರೋಪಿಗಳಲ್ಲಿ ಐದು ಜನರನ್ನ ಬಂಧಿಸಿದ್ದು ಇನ್ನು ಇಬ್ಬರಿಗಾಗಿ ಶೋಧ ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷಗಠಿಯಲ್ಲಿ ತಿಳಿಸಿದ್ದಾರೆ ಪ್ರಸಿದ್ಧ ಅಂತರ ರಾಷ್ಟ್ರೀಯ ಕಂಪನಿಗಳ ವೇರ್‌ಹೌಸ್ ಹಾಗೂ ಗೋಡನ್‌ಗಳ ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ 75ಲಕ್ಷ ಮೌಲ್ಯದ ವಸ್ತುಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಸೋಮವಾರ ಸಂಜೆ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಘಟನೆ ಹಿನ್ನಲೆ: ಕಳೆದ 2023ರ ಫೆ.19ರಂದು ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯ ಪ್ಯಾನಸೋನಿಕ್ ಇಂಡಿಯಾ ಪ್ರೈ.ಲಿ. ಗೋಡನ್‌ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ವೇರ್‌ಹೌಸ್ ಶೀಟ್‌ಗಳನ್ನು ಕಿತ್ತು ಒಳಗೆ ಬಂದು ಸುಮಾರು 69.2 ಲಕ್ಷಮೌಲ್ಯದ ಲ್ಯಾಪ್‌ಟ್ಯಾಫ್, ಹೆಡ್‌ಫೋನ್,…

Read More

ಪರಿಸರ ಸಮತೋಲನೆಯಲ್ಲಿ ಪ್ರಮುಖ ಪಾತ್ರವಹಿಸುವ ಗಿಡಮರಗಳನ್ನು ಹೆಚ್ಚು ಬೆಳೆಸಬೇಕಿದೆ: ನಗರಸಭಾ ಸದಸ್ಯ ಎನ್.ಗಣೇಶ್‌

ನೆಲಮಂಗಲ: ಮಹಾತ್ಮಗಾಂಧೀಜಿ ಅವರ ಮನೆಗೊಂದು ಮರ ಊರಿಗೊಂದು ವನ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಮಾಲಿನ್ಯಮುಕ್ತ ಪರಿಸರದ ಅವಶ್ಯಕತೆಯಿದೆ ಎಂದು ನಗರದ ಸದಸ್ಯ ಎನ್.ಗಣೇಶ್ ಅಭಿಪ್ರಾಯಪಟ್ಟರು. ನಗರದ ಪ್ರವಾಸಿ ಮಂದಿರದ ಅವರಣದಲ್ಲಿ ಎಂ.ಇ.ಎಸ್.ಶಾಲೆಯಿAದ ಪರಿಸರ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಗಿಡನೆಡುವ ಹಾಗೂ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಪ್ರಾಣಿಪಕ್ಷಿಗಳಿಗಷ್ಠೆ ಅಲ್ಲ ಪರಿಸರ ಸಮತೋಲನೆಯಲ್ಲಿ ಪ್ರಮುಖ ಪಾತ್ರವಹಿಸುವ ಗಿಡಮರಗಳನ್ನು ಹೆಚ್ಚು ಬೆಳೆಸಬೇಕಿದೆ ಎಂದರು. ಶಾಲಾಕಾರ್ಯದರ್ಶಿ ಕಾಂತರಾಜು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯಸಂಪತ್ತು ನಾಶ ಮಾಡುವುದು ಒಳ್ಳೆಯದಲ್ಲ. ಇರುವ ಸಸ್ಯ ಸಂಪತ್ತನ್ನು ಉಳಿಸಿಕೊಂಡು ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ದಿನನಿತ್ಯ ವಿವಿಧ ದಿನಾಚರಣೆ ಮಾಡುತ್ತಿರುವ ಸನ್ನಿವೇಶದಲ್ಲಿ ಪರಿಸರದ ದಿನಾಚರಣೆಯ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಶಾಲಾಮಕ್ಕಳು ಚಿಕ್ಕಂದಿನಲ್ಲಿಯೇ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು…

Read More