ಕುಖ್ಯಾತ ಅಂತರ್‌ರಾಜ್ಯ ಕಳ್ಳರನ್ನ ವಶಪಡಿಸಕೊಂಡ ನೆಲಮಂಗಲ ಪೊಲೀಸರು

ನೆಲಮಂಗಲ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ಸಿಯಾಗಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಭದ್ರಾಪುರ ಗ್ರಾಮದ ನಿವಾಸಿ ಚಂದ್ರಶೇಖರ್(೨೭), ಚಿಕ್ಕಮಂಗಳೂರು ಜಿಲ್ಲೆಯ ದುಬೈನಗರ ನಿವಾಸಿ ಯತೀಶ್(೨೬) ಬಂಧಿತ ಆರೋಪಿಗಳು. ಏನಿದು ಘಟನೆ: ಕಳೆದ ೩ ತಿಂಗಳ ಹಿಂದೆ ನಗರ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನ ವಾಗಿದ್ದು ದ್ವಿಚಕ್ರವಾಹನ ಮಾಲೀಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಇತ್ತೀಚೆಗೆ ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಗ್ರಾಮದ ಬಳಿ ಕಳ್ಳತನ ಮಾಡಿದ್ದ ಬೈಕ್‌ನಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶಶಿಧರ್ ನೇತೃತ್ವದ ಪೊಲೀಸ್ ಸಿಬ್ಬಂದಿಗಳ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಬೈಕ್ ವಶಪಡಿಸಿಕೊಂಡಿದ್ದಾರೆ. ವಿವಿಧ ಪ್ರಕರಣಗಳು ಬೆಳಕಿಗೆ: ಬಂಧಿತ ಆರೋಪಿಗಳನ್ನು ವಿಚಾರ ನಡೆಸಿದಾಗ ನಗರ ಪೊಲೀಸ್…

Read More