Nelamangala: ಎರಡು ಬೈಕ್‌ಗಳ ನಡುವೆ ಭಿಕರ ಅಪಘಾತ, ಓರ್ವ ಸಾವು ಇಬ್ಬರು ಪಾರಾಗಿದ್ದೆ ಅಚ್ಚರಿ

ನೆಲಮಂಗಲ: ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಸವಾರರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರಗೆ ದಾಖಲಾಗಿದ್ದಾರೆ. ಮಧುಗಿರಿ ಮೂಲದ ನರಸಿಂಹರಾಜು (24) ಮೃತ ಬೈಕ್ ಸವಾರ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿ ಘಟನೆ ನಡೆಇದದ್ದು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಂ ಉಂಟಾಗುತ್ತು. ಮತ್ತೊಂದು ಬೈಕ್ ಸಚಾರ ಶಿವಪ್ರಸಾದ್ ಹಾಗೂ ಮತ್ತೋರ್ವನಿಗೆ ಗಂಭೀರ ಗಾಯ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ, ಘಟಮೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Read More

ಭೂಕಬಳಿಕೆಯಿಂದ ಆನ್ಯಾಯ, ಸಗಣಿ ಸುರಿದುಕೊಂಡು ದಲಿತ ಕುಟುಂಬಗಳ ಪ್ರತಿಣಟನೆ

NELAMANGALA

ನೆಲಮಂಗಲ: ನಕಲಿ ದಾಖಲೆ ಸೃಷ್ಠಿಸಿ ಜಮೀನು ಕಬಳಿಕೆ ಹಿನ್ನಲೆ ನ್ಯಾಯಕ್ಕೆ ಸಗಣಿ ಸುರಿದುಕೊಂಡು ರೈತರು ಅಧಿಕಾರಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು. ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬಳಿ ಸೋಮವಾರ ಬೆಳಗ್ಗೆ ಸಮಾವೇಶಗೊಂಡÀ ತಾಲೂಕಿನ ಕೊಡಿಗೇಹಳ್ಳಿ, ಕೆಂಚನಪುರ ಗ್ರಾಮದ ರೈತರ ಜಮೀನನ್ನು ನಕಲಿ ದಾಖಲೆಯನ್ನು ಸೃಷ್ಠಿಸಿ ಭೂಕಬಳಿಕೆ ಮಾಡಿಕೊಂಡಿರುವ ಹಿನ್ನಲೆ ನ್ಯಾಯ ದೊರಕಿಸಿಕೊಡುವಂತೆ ಮೈ ಮೇಲೆ ಸಗಣಿ ಸುರಿದುಕೊಂಡು ಅಧಿಕಾರಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದನ್ನೂ ನೋಡಿ: ಒಲವಿನ ಪ್ರಿಯಲತೆ ಅವಳದೇ ಚಿಂತೆಹಾಡು ಹಾಡಿದ ಲೀಲಾವತಿ ಘಟನೆ ಹಿನ್ನಲೆ: ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಕೆಂಚನಪುರ ಗ್ರಾಮದ ರೈತರಿಗೆ ಸೇರಿದ್ದ ಜಮೀನು ಓಬಳಾಪುರ ಗ್ರಾಮದ ೧೯೯/೨, ೧೯೯\೩, ೨೦೦, ಸೇರಿದಂತೆ ೮ ಸರ್ವೆಗಳ ಸುಮಾರು ೧೫.೩ಎಕರೆ ಜಮೀನನ್ನು ಕಳೆದ ೩೦ವರ್ಷಗಳ ಹಿಂದೆ ಸರ್ಕಾರ ಸಾಗುವಳಿ ಚೀಟಿಯನ್ನು ನೀಡಿತ್ತು. ಬಳಿಕ ೨೦೦೫ರಲ್ಲಿ ಹಾಗೂ ೨೦೧೦ರಲ್ಲಿ ರೈತರು ಬೆಂಗಳೂರಿನ…

Read More

ಕಾಂಗ್ರೆಸ್ ಗೆಲುವಿಗೆ ಸುಧಾಂ ದಾಸ ಶ್ರಮ ಅಪಾರ: ಯಾರು ಈ ಸುಧಾಂ ದಾಸ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಗೆಲುವಿನ ಪತಾಕೆಯನ್ನು ಕರ್ನಾಟಕದಲ್ಲಿ ಹಾರಿಸಿದ್ದು, ಭ್ರಷ್ಟ ಬಿಜೆಪಿಯಿಂದ ಕರ್ನಾಟಕದವನ್ನು ಉಳಿಸಿಕೊಂಡಂತಹ ಹರ್ಷದಲ್ಲಿ ಕನ್ನಡಿಗರಿದ್ದಾರೆ. ಕಾಂಗ್ರೆಸ್ ಸರ್ಕಾರವು ತನ್ನ ಗೆಲುವನ್ನು ಸಾಧಿಸಲು ಸಾಕಷ್ಟು ಜನ ಶ್ರಮ ಪಟ್ಟಿದ್ದು ಅದರಲ್ಲಿ ಬಹು ಮುಖ್ಯವಾಗಿ ಕರ್ನಾಟಕದ ಜೋಡೆತ್ತುಗಳಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ನಿರಂತರವಾಗಿ ಕರ್ನಾಟಕ ರಾಜ್ಯ ಪ್ರವಾಸದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಪಟ್ಟಿದ್ದಾರೆ. ಈಗ ಕಾಂಗ್ರೆಸ್ ಪಾಳಯದಲ್ಲಿ ಹಲವಾರು ಭಿನ್ನಾಭಿಪ್ರಾಯಗಳು ಮೂಡುತ್ತಿದ್ದು ಎಂಎಲ್ಸಿ ಆಯ್ಕೆಯ ವಿಚಾರವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಎಚ್.ಪಿ ಸುಧಾಮದಾಸ್ ( ಮಾಜಿ ಆಯುಕ್ತರು, ಮಾಹಿತಿ ಆಯೋಗ) ರವರ ಹೆಸರು ಕೇಳಿ ಬರುತ್ತಿದ್ದು ಇವರಿಗೆ ಎಂಎಲ್ಸಿ ಟಿಕೆಟ್ ನೀಡಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಈಗಾಗಲೇ ಹಸಿರು ನಿಶಾನೆಯನ್ನು ತೋರಿದ್ದಾರೆ ಎಂಬುದು…

Read More