ಭಾರಿ ಕಂದಕಕ್ಕೆ ಬಿದ್ದರು ಬದುಕುಳಿದ ಐದು ಜನ: ಅವರು ಬದುಕಿದ್ದೇ ಅಚ್ಚರಿ

ಬೆಂಗಳೂರು: ಬೆಂಗಳೂರಿನಿಂದ ಹಾಸನದಲ್ಲಿ ಕುಟುಂಬಸ್ಥರೊಬ್ಬರ ಶ್ರಾದ್ದ ಕಾರ್ಯಕ್ಕೆ ತೆರಳುತ್ತಿದ್ದ ಕಾರಿಗೆ ಹಿಟಾಚಿ ತುಂಬಿದ್ದ ಲಾರಿಯೊಂದು ಕಾರಿಗೆ ಗುದ್ದಿದ ಪರಿಣಾಮ 15 ಅಡಿ ಹಳ್ಳಕ್ಕೆ ಬಿದ್ದಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಾದಾವರ ಬಳಿ ನಡೆದಿದೆ. ಕಾರಿನಲ್ಲಿ ಚಾಲಕ ಅನೀಲ್ ಕುಮಾರ್, ವಾಸುದೇವಮೂರ್ತಿ, ಶಂಕರ್ ನಾರಾಯಣ್, ನಾಗರಾಜು, ಅರುಣಾ ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನೈಸ್‌ ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸೋ  ಮಾದವಾರ ಜಂಕ್ಷನ್‌ನಲ್ಲಿ ಅವಘಡ  ಸಂಭವಿಸಿದೆ ಈ ವೇಳೆ ನಡೆದ ಅವಘಡದಲ್ಲಿ ಅರುಣಾ ಎಂಬುವರಿಗೆ ಗಂಭೀರ ಗಾಯವಾಗಿದ್ದು ಇನ್ನುಳಿದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಕಿಲೋಮೀಟರ್ ಗೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಕೂಡಲೇ ನೆಲಮಂಗಲ ಸಂಚಾರಿ ಪೊಲಿಸರು…

Read More