ಲಾರಿ ಕಳ್ಳತನ ಮಾಡುತ್ತಿದ್ದವನು ಅರೆಸ್ಟ್!? ಕದ್ದ ಲಾರಿಯನ್ನ ಮಾರಾಟ ಮಾಡುತ್ತಿದ್ದದು ಹೇಗೆ!?

ಬೆಂಗಳೂರು: ಲಾರಿಗಳನ್ನ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅರೊಪಿಯನ್ನ ವಿವಿ ಪುರಂ ಪೊಲೀಸರು ಬಂದಿಸಿದ್ದು ತಮಿಳುನಾಡು ಮೂಲದ  ಮುತ್ತುರಾಜ್ ಬಂಧಿತ ಆರೋಪಿ, ಪಾರ್ಕಿಂಗ್ ಲಾಟ್‌ಗಳಲ್ಲಿ ನಿಲ್ಲಿಸುವ ಲಾರಿಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳನ ಬಂಧನವಾಗಿದೆ. ಎಂಜಿನ್ ಟ್ಯಾಪರಿಂಗ್: ಬೆಂಗಳೂರಿನ ಹಲವೆಡೆ ಪಾರ್ಕಿಂಗ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಮುತ್ತುರಾಜ್ ಕದ್ದ ಲಾರಿಗಳನ್ನ ಸ್ನೇಹಿತರ ಮೂಲಕ ಮಾರಾಟ ಮಾಡುತ್ತಿದ್ದ. ಆರೋಪಿ ಮುತ್ತುರಾಜ್‌ನ ಓರ್ವ ಸ್ಬೇಹಿತ ಇಂಜಿನ್ ಮತ್ತು ಚಾಸಿಸ್ ನಂಬರ್ ಟ್ಯಾಂಪರಿಂಗ್ ಮಾಡುತ್ತಿದ್ದ ಹಾಗೂ ಮತ್ತೊಬ್ಬ ಅಸಾಮಿ ಲಾರಿಗೆ ಸಂಬಂಧಿಸಿದ ನಕಲಿ ದಾಖಲೆ ಸೃಷ್ಟಿಸುತ್ತಿದ್ದೆ‌. ಐಷಾರಾಮಿ ಜೀವನಕ್ಕೆ ಕಳ್ಳತನ: ಕ್ಷಣಾರ್ಧದಲ್ಲಿ ಲಾರಿ ಕಳ್ಳತನ ಮಾಡುತ್ತಿದ್ದ ಮುತ್ತುರಾಜ್ ಹಾಗೂ ಗ್ಯಾಂಗ್ ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದರು.ಬಂಧಿತನಿಂದ 1.5 ಕೋಟಿ ಮೌಲ್ಯದ ಮೂರು ಲಾರಿಗಳು ವಶಕ್ಕೆ ಪಡೆಯಲಾಗಿದೆ. 1000ಕ್ಕೂ ಅಧಿಕ ಸಿಸಿ ಕ್ಯಾಮೆರಾ ಪರಿಶೀಲನೇ: ಇನ್ನೂ ಲಾರಿ ಕಳ್ಳತನ ಪ್ರಕರಣ…

Read More