ಲೋಕಾ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ಹೈಫೈ ಎಣ್ಣೆ ಬಾಟಲಿ ಪತ್ತೆ, ಐಷಾರಾಮಿ ಕಾರುಗಳ ಒಡೆಯ ಈ ಅಧಿಕಾರಿ

ಬೆಂಗಳೂರು: ಈ ಹಿಂದದೆ ಕೆ.ಆರ್ ಪುರಂ (K R Puram) ತಹಸಿಲ್ದಾರ್ (Tahasildar) ಆಗಿದ್ದ ಅಜೀತ್‌ ರೈ (Ajith Rai) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಆರ್ ಪುರಂ ನಲ್ಲಿರು ಮನೆ ಸೇರಿದಂತೆ ತಹಸಿಲ್ದಾರ್‌ಗೆ ಸೇರಿದ ನಗರದ ಹತ್ತು ಕಡೆ 20 ಕ್ಕು ಹೆಚ್ಚು ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ತಹಶಿಲ್ದಾರ್ ಮನೆಯಲ್ಲಿ ಹತ್ತು ಲಕ್ಷಕ್ಕು ಹೆಚ್ಚು ಹಣ ಸಿಕ್ಕಿದೆ ಎನ್ನುವ ಮಾಹಿತಿ ಲಭಿಸಿದ್ದು ಸದ್ಯ ಅಜಿತ್ ರೈ ಮನೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳಿಂದ ಫುಲ್ ಡ್ರಿಲ್ ನಡೆಯುತ್ತಿದೆ, ಹಣ ಸೇರಿದಂತೆ ಅನೇಕ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಕೆ ಆರ್ ಪುರಂ ತಹಶಿಲ್ದಾರ ಅಜಿತ್ ರೈ ಇದ್ದ ವೇಳೆ ಸಾಕಷ್ಟು ಆಕ್ರಮ ಆಸ್ತಿ ಗಲಿಸರುವ ಆರೋಪ. ಕೆ ಆರ್ ಪುರಂ ನಲ್ಲಿ ರಿಯಲ್ ಎಸ್ಟೇಟ್ ಎತೆಚ್ಚಾವಾಗಿ…

Read More

2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಬಿದ್ದ ಪಿಡಿಓ -Digital Varthe

ನೆಲಮಂಗಲ (ಜೂ08): ಭೂಮಿ ಖಾತೆ ಮಾಡಿಕೊಡಲು ಸಾರ್ವಜನಿಕರಿಂದ 2 ಲಕ್ಷ ಲಂಚಕ್ಕೆ ಭೇಡಿಕೆ ಇಟ್ಟಿದ್ದ ಭ್ರಷ್ಟ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎನ್. ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಗಳಕುಪ್ಪೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಖಾರಿ ಎನ್.ನರಸಿಂಹಮೂರ್ತಿ ಸಾರ್ವಜನಿಕರೊಬ್ಬರಿಗೆ ಖಾತೆ ಮಾಡಿಕೊಡಲು 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು, ಈ ಹಣವನ್ನ ಇಂದು ನೆಲಮಂಗಲ ಪರಿವೀಕ್ಷಣ ಮಂದಿರ ಬಳಿ ಇಂದು ತಂದು ಕೊಡಲು ತಿಳಿಸಿದ್ದರು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಸರಣಿ ಕಳ್ಳತನ ಪಿಡಿಒ ಲಂಚಕ್ಕೆ ಭೇಡಿಕೆ ಇಟ್ಟಿದ್ದ ವಿಚಾರವನ್ನ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು, ದೂರಿನನ್ವಯ ಲೋಕಾಯುಕ್ತ ಡಿವೈಎಸ್‌ಪಿ ರೇಣುಕಾಪ್ರಸಾದ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಿಡಿಒ ನರಸಿಂಹಮೂರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ.

Read More