ಕುವೆಂಪು ವಿವಿ ಕುಲಪತಿ ಹಾಗೂ ಇತರ ಇಬ್ಬರು ಅಧಿಕಾರಿಗಳ ವಿರುದ್ದ ತನಿಖೆಗೆ ರಾಜ್ಯ ರಾಜ್ಯ ಸರ್ಕಾರ ಆದೇಶ

ಶಿವಮೊಗ್ಗ(ಜೂ 03): ಕುವೆಂಪು ವಿವಿ ಕುಲಪತಿ ಹಾಗೂ ಇತರ ಇಬ್ಬರು ಅಧಿಕಾರಿಗಳ ವಿರುದ್ದ ತನಿಖೆಗೆ ರಾಜ್ಯ ರಾಜ್ಯ ಸರ್ಕಾರ ಆದೇಶ ಮಾಡಿದ್ದು ನಿವೃತ್ತ ನ್ಯಾಯಾದೀಶರೊಬ್ಬರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವ (ಪರೀಕ್ಷಾಂಗ) ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ನಿರ್ದೇಶಕರ ವಿರುದ್ದ ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಏನು ಪ್ರಕರಣ: 2019ರಲ್ಲಿ ದೂರ ಶಿಕ್ಷಣದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಕುವೆಂಪು ವಿವಿ ಫಲಿತಾಂಶ ಪ್ರಕಟಿಸಿತ್ತು. ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಫಲಿತಾಂಶ ನೀಡಿದ್ದ ವಿಶ್ವವಿದ್ಯಾಲಯ. ಈ ಬಗ್ಗೆ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳಕೆರೆ ಹಾಗೂ ಆರ್ಟಿಐ ಕಾರ್ಯಕರ್ತ ಗಜಾನನ ದಾಸ್ ಕೆ.ಜಿ ಹಾಗೂ ಎಸ್.ಎಂ ಮಹಾದೇವಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಆನೆ ದಂತ…

Read More