ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕೇರಳ ಮೂಲದ ವ್ಯಕ್ತಿ

ನೆಲಮಂಗಲ (ಮೇ 31) : ಟವಲ್‌ನಿಂದ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಸುಭಾಷ್‌ನಗರದಲ್ಲಿ ಈ ಘಟನೆ ಸಂಭವಿಸಿದ್ದು ನೆರೆ ರಾಜ್ಯ ಕೇರಳದ ಕಣ್ಣೂರು ಜಿಲ್ಲೆಯ ಪೆರಂದಟ್ಟ ಮೂಲದ ಎವಿ ವಿನೀಶ್‌ (37) ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ವಿನೀಶ್‌ ಮೃತಾ ದೇಹದ ಬಳಿ ಡೆತ್‌ ನೋಟ್‌ ಒಂದು ಪತ್ತೆಯಾಗಿದ್ದು, ವಿನೀಶ್‌ ಆತ್ಮಹತ್ಯೆಗೆ ಮಾಡಿಕೊಳ್ಳುವ ಮುನ್ನ ಡೆತ್‌ ನೋಟ್‌ ಬರೆದಿದ್ದಾನೆ ಎನ್ನಲಾಗುತಿದ್ದು, ಡೆತ್‌ ನೋಟ್‌ನಲ್ಲಿ ಅಪ್ಪ ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ, ಮೇಲಿನಿಂದ ನಿಮ್ಮನ್ನ ನೋಡುತ್ತಿರುತ್ತನೆ ಎಂದು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾನೆ ಎನ್ನಲಾಗುತ್ತಿದೆ, ಮೃತ ವಿನೀಶ್‌ ಕಳೆದ 15 ವರ್ಷದ ಹಿಂದೆ ಉದ್ಯೋಗಕ್ಕಾಗಿ ಕೇರಳದಿಂದ ನೆಲಮಂಗಲಕ್ಕೆ ಬಂದಿದ್ದು ಸದ್ಯ ನೆಲಮಂಗಲ ಹೊರವಲಯದಲ್ಲಿರುವ ಪವರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಇನ್ನೂ…

Read More