ಕೆಂಪೆಗೌಡರ ಮುಖಕ್ಕೆ ಕಪ್ಪುಮಸಿ ಬಳಿದ ಪ್ರಕರಣ : ಅಧಿಕಾರಿಗಳಿಗೆ ತಹಸಿಲ್ದಾರ್ ನೋಟಿಸ್

ನೆಲಮಂಗಲ: ನೆಲಮಂಗಲದ ಕುಣಿಗಲ್ ಸರ್ಕಲ್‌ನಲ್ಲಿರುವ ರಾಜ್ಯ ಒಕ್ಕಲಿಗರ ವೇದಿಕೆಯ ನಾಮಫಲಕದಲ್ಲಿದ್ದ ಕೆಂಪೆಗೌಡರ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆಲಮಂಗಲದಲ್ಲಿ ಕೆಂಪೆಗೌಡ ಹೋರಾಟ ಬಳಗದವರು ಪ್ರತಿಭಟನೆ ನಡೆಸಿದ್ದು ತಪ್ಪಿತಸ್ಥರನ್ನ ಬಂಧಿಸುವಂತೆ ಆಗ್ರಹಿಸಿ ತಹಸಿಲ್ದಾರ್ ಕಚೇರಿಗೆ ಮನವಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕಿಡಿಗೇಡಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಅತೀ ಶೀಘ್ರದಲ್ಲೆ ತಹಸಿಲ್ದಾರ್ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ. ನೋಟಿಸ್‌ನಲ್ಲಿ ಏನಿದೆ: ನೆಲಮಂಗಲ ನಗರದ ರಾಷ್ಟ್ರೀಯ ಹೆದ್ದಾರಿ 48 ರ ಸರ್ವಿಸ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 75 ರ ಕಡೆ ಹೋಗುವ ಕುಣಿಗಲ್ ಬೈಪಾಸ್‌ನ ನಾಡಪ್ರಭು ಕೆಂಪೇಗೌಡರ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಐಕ್ಯಸ್ಥಳಕ್ಕೆ ಹೋಗುವ ದಾರಿಯನ್ನು ತೋರಿಸುವ ನಾಮಫಲಕವನ್ನು ರಾಜ್ಯ ಒಕ್ಕಲಿಗರ ಜಾಗೃತಿ ವೇದಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್…

Read More

ಕೆಂಪೆಗೌಡರ ಭಾವಚಿತ್ರಕ್ಕೆ ಮಸಿ, ನೆಲಮಂಗಲದಲ್ಲಿ ಬುಗಿಲೆದ್ದ ಜನಾಕ್ರೋಶ

ನೆಲಮಂಗಲ: ನೆಲಮಂಗಲದ ಕುಣಿಗಲ್ ಸರ್ಕಲ್‌ನಲ್ಲಿರುವ ರಾಜ್ಯ ಒಕ್ಕಲಿಗರ ವೇದಿಕೆಯ ನಾಮಫಲಕದಲ್ಲಿದ್ದ ಕೆಂಪೆಗೌಡರ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆಲಮಂಗಲದಲ್ಲಿ ಕೆಂಪೆಗೌಡ ಹೋರಾಟ ಬಳಗದವರು ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ತಡೆ: ಕುಣಿಗಲ್ ಬೈಪಾಸ್‌ ಸರ್ಕಲ್‌ನಲ್ಲಿ ಪ್ರತಿಭಟನ ನಿರತ ನಾಗರೀಕರು ಹೆದ್ದಾರಿ ತಡೆದು ಮಾನವ ಸರಪಳಿ ರಚಿಸಿದರು. ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಪ್ರತಿಭಟನಾ ನಿರತರು ಕಪ್ಪು ಬಣ್ಣ ಬಳಿದವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾದು ನಿಂತಿದ್ದರು. ಅನುಮಾನ: ಇತ್ತೀಚೆಗೆ ನಡೆದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ವೇಳೆ ರಾಜಕೀಯ ಮುಖಂಡರ ಭಾವಚಿತ್ರಗಳನ್ನ ಮರೆಮಾಚುವಂತೆ ಚುನಾವಣಾ ಆಯೋಗ ಆದೇಶ ಮಾಡಿತ್ತು. ಇದರಂತೆ ನಗರಸಭೆ ಅಧಿಕಾರಿಗಳು ಎಲ್ಲೆಡೆ ಕಪ್ಪು ಬಣ್ಣ ಬಳಸಿ ರಾಜಕೀಯ ಮುಖಂಡರ ಭಾವಚಿತ್ರಗಳನ್ನ ಮರೆಮಾಚಿದ್ದರು. ಬಹುಶಃ ಚುನಾವಣೆ…

Read More