ಕೆಡಬ್ಲ್ಯೂ ಜೆವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರಸಾಗರ ಭಾನುಪ್ರಕಾಶ್. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ನೇಮಕ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ( ಕೆ ಡಬ್ಲ್ಯೂ ಜೆ ವಿ ) ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರ ಸಾಗರ ಭಾನುಪ್ರಕಾಶ್ ಪ್ರಧಾನ ಕಾರ್ಯದರ್ಶಿಯಾಗಿ ಬಿ. ಕೆ ಮಹೇಶ್ ರವರ ಅಮೂಲಾಗ್ರ ಸಂಘಟನಾತ್ಮಕ ಸೇವೆಯನ್ನು ಗಮನಿಸಿ ಕೆಡಬ್ಲ್ಯೂ ಜೆ ವಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ರಾಜ್ಯ ಪದಾಧಿಕಾರಿಗಳ ಒಮ್ಮತದ ಮೇರೆಗೆ ಆಯ್ಕೆ ಮಾಡಲಾಯಿತು. ತಮ್ಮ ಅವಧಿಯಲ್ಲಿ ಪತ್ರಕರ್ತರನ್ನು ಸಂಘಟಿಸುವುದರ ಜೊತೆಯಲ್ಲಿ ಅವರ ಮೂಲಭೂತ ಹಕ್ಕುಗಳು ಹಾಗೂ ಅವರ ಕಾರ್ಯನಿರ್ವಹಿಸುವಾಗ ಎದುರಾಗುವ ಸಮಸ್ಯೆಗಳಿಗೆ ಧ್ವನಿ ಯಾಗಬೇಕು ಎಂದು ಸೂಚಿಸಿದ್ದಾರೆ. Read This: 2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಬಿದ್ದ ಪಿಡಿಓ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಆ ದಿನಗಳು ಮಾಸಪತ್ರಿಕೆಯ ಸಂಪಾದಕರಾದ ವೀರಸಾಗರ ಬಾನು ಪ್ರಕಾಶ್ ಮಾತನಾಡಿ ನನ್ನನ್ನು ಆಯ್ಕೆ ಮಾಡಿದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳಿಗೆ ಅಭಾರಿಯಾಗಿದ್ದೇನೆ ಎಂದರು.

Read More

ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ: ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ನೋಡಿ

ಬೆಂಗಳೂರು (ಜೂ 1): ರಾಜ್ಯದಲ್ಲಿ 15 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನೆನ್ನೆ ಲೋಕಯುಕ್ತ ದಾಳಿ ನಡೆಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನರ, ತುಮಕೂರು, ಕೊಪ್ಪಳ, ಮಂಗಳೂರು, ಹಾವೇರಿ, ಉಡುಪಿಯಲ್ಲಿ ದಾಳಿ ನಡೆದಿದೆ. ನಿನ್ನೆ ಏಕಕಾಲದಲ್ಲಿ ರಾಜ್ಯದ ಒಟ್ಟು 57 ಕಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ನೆನ್ನೆ ಯಾವ್ಯಾವ ಅಧಿಕಾರಿಗಳ ಮೇಲೆ ದಾಳಿ ನಡೆಯಿತು, ಅದರಲ್ಲಿ ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ಮೌಲ್ಯ ಎಷ್ಟು ಅಂತಾ ಈ ಕೆಳಗೆ ನೀಡಲಾಗಿದೆ. 1) ಎಚ್.ಜೆ. ರಮೇಶ್, ಚೀಫ್ ಇಂಜಿನಿಯರ್ ಬೆಸ್ಕಾಂ. ರಮೇಶ್ ಗೆ ಸೇರಿದ ನಾಲ್ಕು ಕಡೆ ದಾಳಿ, ಒಟ್ಟು 5.6ಕೋಟಿ ಮೌಲ್ಯದ ಆಸ್ತಿ ಪತ್ತೆ 2) ಟಿ.ಬಿ. ನಾರಾಯಣಪ್ಪ, ಡೆಪ್ಯೂಟಿ ಡೈರೆಕ್ಟರ್ ಆಫ್ ಫ್ಯಾಕ್ಟರೀಸ್, ಕಾರ್ಮಿಕ ಭವನ, ನಾರಾಯಣಪ್ಪಗೆ ಸೇರಿದ ೧೦ ಸ್ಥಳಗಳಲ್ಲಿ ದಾಳಿನಾರಾಯಣಪ್ಪಗೆ ಸೇರಿದ ಒಟ್ಟು ೨.೫ ಕೋಟಿಯಷ್ಟು…

Read More

ಅನುಭವಿ ಸಚಿವರಾದ ಡಾ.ಜಿ.ಪರಮೇಶ್ವರ್‌ಗೆ ಮತ್ತೊಮ್ಮೆ ಒಲಿದ ಸಚಿವಸ್ಥಾನ

-ಅನೀಲ್ ಕುಮಾರ್ ಚಿಕ್ಕದಾಲವಟ್ಟ ತುಮಕೂರು ಜಿಲ್ಲೆ ತಮ್ಮ ಕಾರ್ಯಕ್ಷೇತ್ರವಾದರೂ, ರಾಜ್ಯದ ರಾಜಕಾರಣದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿ ಬೆಳೆದು ಗುರುತಿಸಿಕೊಂಡವರು ಡಾ. ಜಿ ಪರಮೇಶ್ವರ್. ದೀರ್ಘಕಾಲದವರೆಗೆ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು, ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಶಾಸಕ, ಸಚಿವ, ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಅಲಂಕರಿಸಿ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಡಾ. ಜಿ. ಪರಮೇಶ್ವರ್ ಮೂಲತಃ ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯ ಗ್ರಾಮದವರು. ತಂದೆ ಹೆಚ್.ಎಂ. ಗಂಗಾಧರಯ್ಯನವರು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಭೀಷ್ಮ ಎಂದೇ ಹೆಸರಾಗಿದ್ದರು. ದಲಿತ ಕುಟುಂಬದಲ್ಲಿ ಹುಟ್ಟಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಿದ್ಧಾರ್ಥ ಹೆಸರಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಟ್ಟಿಬೆಳೆಸಿದರು. ಹೆಚ್.ಎಂ. ಗಂಗಾಧರಯ್ಯನವರ ನಂತರ ಅವರ ಹಿರಿಯ ಪುತ್ರ ಡಾ. ಜಿ ಶಿವಪ್ರಸಾದ್ ಹಾಗೂ ಪರಮೇಶ್ವರ್‌ರವರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ಹೊತ್ತುಕೊಂಡರು. ಅಣ್ಣ ನಿಧನರಾದ ನಂತರ ಈಗ…

Read More