ಕವಿತೆ: ನೆನಪು, ಲೇಖಕರು: ಮಣ್ಣೆ ಮೋಹನ್

ನೆನಪು ಮಳೆಯ ಹನಿಯು ನಿಂತರುಮರದ ಹನಿಯು ನಿಲ್ಲದಂತೆ/ನೀನು ದೂರ ಹೋದರುನಿನ್ನ ನೆನಪು ಬೆಲ್ಲದಂತೆ// ಹನಿಯನೊತ್ತ ಮರಕೀಗಸಂಭ್ರಮದ ಝಳಕ/ನೆನಪನ್ನೊದ್ದ ನನ್ನ ಮನಕೆಸಂತಸದ ಪುಳಕ// ಹನಿಯನೊದ್ದ ಎಲೆಗಳುಎಷ್ಟೊಂದು ಸುಂದರ/ನೆನಪ ಅಲೆಯ ಭಾವಗಳುಎಂದೆಂದಿಗೂ ಮಧುರ// ಮರದ ಹನಿಯು ಬಿದ್ದ ಮೇಲೆಮರದ ಭಾರವೆಲ್ಲ ಹಗುರ/ನಿನ್ನ ನೆನಪು ಹೋದ ಗಳಿಗೆನನ್ನ ಹೃದಯ ಬಲು ಭಾರ// –ಮಣ್ಣೆ ಮೋಹನ್

Read More