ಬಂಪರ್ ಆಫರ್..ರಿಷಿ ರಾಮನ ಅವತಾರ ಸಿನಿಮಾ ರೇಟ್ ಜಸ್ಟ್ 99 ರೂ.

99 ರೂಪಾಯಿ ಇದ್ರೆ ರಿಷಿ ರಾಮನ ಅವತಾರ ಸಿನಿಮಾ ನೋಡಬಹುದು 99 ರೂಪಾಯಿ ಕೊಡಿ..ರಿಷಿ ರಾಮನ ಅವತಾರ ಸಿನಿಮಾ ನೋಡಿ ಸಖತ್ ಸುದ್ದಿ ಕೊಟ್ರು ರಿಷಿ..ರಾಮನ ಅವತಾರ ಸಿನಿಮಾ ಟಿಕೆಟ್ ಬೆಲೆ ಕೇವಲ 99 ರೂಪಾಯಿ ‘ಕವಲುದಾರಿ’ಯಂತಹ ಗಂಭೀರ ಸಿನಿಮಾಗೂ ಸೈ..’ನೋಡಿ ಸ್ವಾಮಿ ಇವನು ಇರೋದು ಹೀಗೆ’, ‘ಆಪರೇಷನ್ ಅಲಮೇಲಮ್ಮ’ ದಂತಹ ಕಾಮಿಡಿ ಚಿತ್ರಗಳಲ್ಲಿಯೂ ನಟಿಸಿ ಗಮನ ಸೆಳೆದಿರುವ ರಿಷಿ ಇದೀಗ ‘ರಾಮನ ಅವತಾರ’ ಮೂಲಕ ಪ್ರೇಕ್ಷಕರ ಎದುರು ಬರ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗ್ತಿದೆ. ವಿಭಿನ್ನ ಪ್ರಮೋಷನ್ ವಿಡಿಯೋ ಮೂಲಕ ರಾಮನ ಅವತಾರ ಬಳಗವೀಗ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗ ಚಿತ್ರತಂಡದ ಕಡೆಯಿಂದ ಮೆಗಾ ಆಫರ್ ವೊಂದು ಸಿಕ್ಕಿದೆ. ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ…

Read More

‘ಅಧಿಪತ್ರ’ ಹೊರಡಿಸಿದ ರೂಪೇಶ್ ಶೆಟ್ಟಿ!! ಅಧಿಪತ್ರ ಸಿನಿಮಾಗೆ ಭರ್ಜರಿ ಡಿಮ್ಯಾಂಡ್,  ಭಾರೀ‌ ಮೊತ್ತಕ್ಕೆ ಸೇಲ್ ಆಯ್ತು ಆಡಿಯೋ ರೈಟ್ಸ್

ರೂಪೇಶ್ ಶೆಟ್ಟಿಯ ಅಧಿಪತ್ರ ಸಿನಿಮಾದ ಆಡಿಯೋ ಹಕ್ಕು ಖರೀದಿಸಿದ ಲಹರಿ ಆಡಿಯೋ ಸಂಸ್ಥೆ ಅಧಿಪತ್ರ ಸಿನಿಮಾದ ಆಡಿಯೋ ಹಕ್ಕು ಲಹರಿ ತೆಕ್ಕೆಗೆ…ರೂಪೇಶ್ ಶೆಟ್ಟಿ ಚಿತ್ರದ ಹವಾ‌ ನೋಡಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ‌ ಬಹು ನಿರೀಕ್ಷಿತ ಸಿನಿಮಾ ಅಧಿಪತ್ರ. ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು ಮೇ‌ 10ಕ್ಕೆ ಅಧಿಪತ್ರ ಟೀಸರ್: ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್ನಿಂದಲೂ ಎಲ್ಲರ ಗಮನ ಸೆಳದಿದೇ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ…

Read More

ಕವಿತೆ: ವನಿತೆ ಜಗದ ತೋರಣ – ಮಣ್ಣೆ ಮೋಹನ್

ಎಲೆಯ ಮರೆಯ ಕುಸುಮ ಬಿರಿದುಪರಿಮಳವ ಸೂಸುತ್ತಿದೆಎಳೆಯ ಹರೆಯ ಚೆಲುವೆ ನಲಿದುಅನುರಾಗವು ಹಾಸುತ್ತಿದೆ ಕುಸುಮ ಸುಗಂಧದ ಘಮಘಮಕೆನಿಸರ್ಗಾಲಯವೇ ಆನಂದಚೆಲುವೆ ಸೌಂದರ್ಯದ ಅನುರಾಗಕೆಪುರುಷಕುಲವೇ ಅನುಬಂಧ ಮಕರಂದದ ಮಾಧುರ್ಯಕೆದುಂಬಿ ನಾದ ರಿಂಗಣಚೆಲುವೆಯ ಮಾರ್ದವತೆಗೆಮನುಕುಲವೇ ತಲ್ಲಣ ಚೆಲುವಿನಿಂದ ಮಿನುಗು ಹೂವುನಿಸರ್ಗ ದೇವಿಯ ಆಭರಣಜಗದ ಚೆಲುವ ಧರಿಸಿ ಮೆರೆವವನಿತೆ ಜಗದ ತೋರಣ –ಮಣ್ಣೆ ಮೋಹನ್ ಲೇಖಕರಾದ ಮಣ್ಣೆ ಮೋಹನ್‌ ರಚಿತ ಕವಿತೆ “ನನ್ನವಳು”‌ ಓದಲು ಕ್ಲಿಕ್‌ ಮಾಡಿ

Read More

ಲೇಖಕರಾದ ಮಣ್ಣೆ ಮೋಹನ್‌ ರಚಿತ ಕವಿತೆ “ನನ್ನವಳು”

ಓ! ತಂಗಾಳಿಯೇನನ್ನವಳ ಮೈ ಸೋಕಿಸಿಘಮ ಸುವಾಸನೆ ಹೊತ್ತು ತಾಓ! ಮೇಘದೂತನೇನನ್ನವಳಿಗೆ ನೆರಳು ನೀಡಿನೆರಳ ತಂಪನು ತೆತ್ತು ತಾಓ! ಮಳೆರಾಯನೇನನ್ನವಳ ಮೈ ತೋಯಿಸಿಮೈಯ್ಯ ಸುಗಂಧವ ತೇದು ತಾಓ! ರವಿ ರಶ್ಮಿಯೇನನ್ನವಳ ಮೈ ಚುಂಬಿಸಿದೇಹ ಕಾಂತಿಯನು ಕಾದು ತಾಓ! ಶಶಿ ಕಾಂತಿಯೇನನ್ನವಳ ಮೈ ಅರಳಿಸಿಉನ್ಮಾದವ ಉತ್ತು ಬಾಓ! ಖಗಗಳ ಹಿಂಡೇನನ್ನವಳ ದನಿಯ ಆಲಿಸಿಸರಿಗಮವ ಹೊತ್ತು ಬಾಓ! ಹಸಿರು ಚಿಗುರೆನನ್ನವಳಿಗೆ ಉಸಿರು ನೀಡಿಅವಳ ಜೀವವ ಉಳಿಸು ಬಾಓ! ಅನಂತ ದೈವವೇಅವಳುಸಿರನು ನನ್ನುಸಿರಲಿ ಬೆರೆಸಿಈರ್ವರನು ಒಂದಾಗಿಸು ಬಾ –ಮಣ್ಣೆ ಮೋಹನ್ ಲೇಖಕರ ಮತ್ತೊಂದು ಕವಿತೆ ನೆನೆಪು ಓದಲು ಕ್ಲಿಕ್‌ ಮಾಡಿ

Read More