ಮಹಾಗಣಪತಿ, ನಾಗದೇವತಾ ಪ್ರತಿಷ್ಠೆ, ಶ್ರೀ ಪ್ರಸನ್ನ ದುರ್ಗಾಪರಮೇಶ್ವರಿ ಸದ್ಗುರು ಸನ್ನಿಧಿಗಳ ಬ್ರಹ್ಮ ಕಲಶೋತ್ಸವ

ಮನುಷ್ಯನಿಗೆ ಆರ್ಥಿಕವಾದಂತಹ ಸಂಪನ್ಮೂಲ ಇರಬಹುದು ಅದನ್ನು ಸಾರ್ವಜನಿಕವಾಗಿ ಸಮಾಜಕ್ಕೆ ವಿನಿಯೋಗ ಮಾಡುವ ಮನಸ್ಸು ಕೆಲವರಿಗಷ್ಟೇ ಇರುತ್ತದೆ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು. ಅಂದ್ರಹಳ್ಳಿಯ ನವಿಲು ನಗರದಲ್ಲಿ ಸರ್ವ ಸಿದ್ದಿ ಸೇವಾ ಟ್ರಸ್ಟ್ ಅಧ್ಯಕ್ಷ ಸೌಂದರ್ಯ ರಮೇಶ್ ಅವರು ಆಯೋಜಿಸಲಾದ ಶ್ರೀ ಪ್ರಸನ್ನ ದುರ್ಗಪರಮೇಶ್ವರಿ ದೇವಸ್ಥಾನ ಮಹಾ ಗಣಪತಿ ನಾಗದೇವರು ಮತ್ತು ಶಿರಡಿ ಸಾಯಿಬಾಬಾ ದೇವರುಗಳ ಸನ್ನಿಧಿಯಲ್ಲಿ ಬ್ರಹ್ಮ ಕಲಶೋತ್ಸವ ಪೂಜಾ ಪ್ರತಿಷ್ಠಾನದಲ್ಲಿ ಭಾಗವಹಿಸಿ ಮಾತನಾಡಿದರು.‘ ನಗರ ಪ್ರದೇಶಗಳಲ್ಲಿ ವಿವಿಧ ಸಮಸ್ಯೆಗಳಿಂದ ಆತಂಕಕ್ಕೆ ಒಳಗಾದವರಿಗೆ ದೇವರ ಆರಾಧನೆಯಿಂದ ಸ್ವಲ್ಪ ನೆಮ್ಮದಿ ಸಿಗುತ್ತದೆ. ಎಲ್ಲವನ್ನು ಬಿಟ್ಟು ದೇವರಲ್ಲಿ ಭಾವನಾತ್ಮಕವಾಗಿ ಧ್ಯಾನ ಮಾಡಿದರೆ ನೆಮ್ಮದಿ ಸಿಗುವ ಜಾಗ ಇದಾಗಿದೆ, ಇದೊಂದು ಪವಿತ್ರ ಪುಣ್ಯಭೂಮಿ’ ಎಂದರು.‘ ಒಳ್ಳೆಯ ಕೆಲಸ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ, ಅಂತಹ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗಬೇಕು. ಅಂತಹ ಕಾರ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳಲ್ಲಿನ…

Read More