ಸಿನಿಮೀಯಾ ರೀತಿಯಲ್ಲಿ ಗಾಂಜಾ ಪೆಡ್ಲರ್ಸ್‌ ಅರೆಸ್ಟ್‌ – Ganja Peddlers Arrest By Nelamangala rural Police

ನೆಲಮಂಗಲ: ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೇಟ್ ಮಾಡಿ ಗಾಂಜಾ ಸಾಗಾಟ ಮಾಡುತ್ತಿದ್ದ 3 ಮಂದಿ ಆರೋಪಿಗಳನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸಿನಿಮೀಯ ರೀತಿ ಬಂಧಿಸಿ 20 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರ ನಿವಾಸಿ ಮದನ್‌ಕುಮಾರ್(55), ನಗರದ ರೇಣುಕಾನಗರದ ನಿವಾಸಿ ಸೈಯದ್‌ನಯಾಸ್(33), ಸೆಟ್ಕರ್‌ಅಕ್ತರ್(19), ಬಂಧಿತ ಆರೋಪಿಗಳು. ಜೂ.28ರಂದು ಮದ್ಯಾಹ್ನ 12 ಗಂಟೆ ವೇಳೆಯಲ್ಲಿ ಟಿ.ಬೇಗೂರು ಗ್ರಾಮದ ಬಳಿಯ ಖಾಸಗಿ ಡಾಬಾ ಬಳಿ ೩ ಮಂದಿ ದುಷ್ಕರ್ಮಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಮಾಹಿತಿ ಆಧಾರಿಸಿ ಸ್ಥಳಕ್ಕೆ ಬೇಟಿ ನೀಡಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ವಿ.ರಾಜೀವ್ ನೇತೃತ್ವದ ಪೊಲೀಸ್ ಸಿಬ್ಬಂದಿಗಳು 3 ಮಂದಿ ಆರೋಪಿಗಳನ್ನು ಬಂಧಿಸಿ 20 ಕೆ.ಜಿ. ಗಾಂಜಾ, ಒಂದು ಚಾಕು, ಬೇಸ್ ಬ್ಯಾಟ್, ಕ್ವಾಲೀಸ್ ಕಾರು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಟಾರ್ಗೇಟ್:…

Read More