ಅನ್ನ, ಅಕ್ಷರ, ಆಶ್ರಯ, ಅಕ್ಕರೆಯ ದಾನಿ;ಬಡಮಕ್ಕಳಿಗೆ ವಿದ್ಯೆ ನೀಡಿದ ಮೈಸೂರಿನ ಜ್ಞಾನಿ – ಮಣ್ಣೆ ಮೋಹನ್

indipendent

ಮಣ್ಣೆ ಮೋಹನ್ ವಿರಚಿತ “ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಿಡಿಗಳು” ಪುಸ್ತಕದಿಂದ ಆಯ್ದ ಭಾಗ ಗಾಂಧೀಜಿಯವರ ಅಪ್ಪಟ ಅಭಿಮಾನಿ, ಅನುಯಾಯಿಯಾದ ಆ ವ್ಯಕ್ತಿ, 1925ರಲ್ಲಿ ಗಾಂಧೀಜಿಯವರ ಭೇಟಿಗಾಗಿ ಗುಜರಾತಿನ ಸಬರಮತಿ ಆಶ್ರಮಕ್ಕೆ ಹೋಗುತ್ತಾರೆ. ಅವರ ದರ್ಶನವಾಗುತ್ತಿದ್ದಂತೆಯೇ, ಆ ವ್ಯಕ್ತಿ ಅವರ್ಣನೀಯ ಆನಂದಕ್ಕೆ ಪಕ್ಕಾಗುತ್ತಾರೆ. ಗಾಂಧೀಜಿಯವರನ್ನು ಕಂಡು ಅವರೊಡನೆ ಮಾತನಾಡುವ ಅವಕಾಶ ದೊರೆತಿದ್ದಕ್ಕೆ ಸಂಭ್ರಮಿಸುತ್ತಾರೆ. ತಮ್ಮನ್ನು ಕಾಣಲು ಬರುವ ಪ್ರತಿಯೊಬ್ಬರನ್ನು ಮಾತನಾಡಿಸಿ, ಅವರಿಗೆ ಒಂದಷ್ಟು ಮಾರ್ಗದರ್ಶನ ನೀಡುವ ಕಾರ್ಯವನ್ನು ಗಾಂಧೀಜಿ ನಿರಂತರವಾಗಿ ಮಾಡುತ್ತಿರುತ್ತಾರೆ. ಹಾಗೆಯೇ, ಈಗಲೂ ಸಹ ಗಾಂಧೀಜಿ ದೇಶಪ್ರೇಮ, ಸರಳ ಜೀವನ, ಶಿಕ್ಷಣ ಪ್ರಸಾರ, ಸ್ವಚ್ಛತೆ, ಅಸಹಾಯಕರಿಗೆ ನೆರವು, ಹರಿಜನ ಸೇವೆ ಮುಂತಾದ ವಿಚಾರಗಳ ಬಗ್ಗೆ ಆ ವ್ಯಕ್ತಿಗೆ ಬೋಧಿಸುತ್ತಾರೆ. ಆ ಬೋಧನೆ ಆ ವ್ಯಕ್ತಿಯ ಮೇಲೆ ಅಪಾರ ಪ್ರಭಾವ ಬೀರುತ್ತದೆ. ತಮ್ಮ ಆಶಯದಂತೆಯೇ ನಡೆಯುತ್ತೇನೆಂದು ಗಾಂಧೀಜಿಯವರಿಗೆ ಭರವಸೆ ನೀಡುತ್ತಾರೆ. ತನ್ನ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಲು ನಿಶ್ಚಯಿಸುತ್ತಾರೆ.…

Read More